ETV Bharat / city

ಕ್ರಿಕೆಟ್ ಬೆಟ್ಟಿಂಗ್: ಹುಬ್ಬಳ್ಳಿಯಲ್ಲಿ ಆರು ಮಂದಿ ಅಂದರ್​​​, ಓರ್ವ ಪರಾರಿ! - cricket betting

ಕ್ರಿಕೆಟ್​ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರು ಮಂದಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.

hubballi cricket betting case
ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ
author img

By

Published : Oct 1, 2021, 2:26 PM IST

ಹುಬ್ಬಳ್ಳಿ: ಐಪಿಎಲ್ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ಟಿಂಗ್ ಆಡುತ್ತಿದ್ದವರನ್ನು ಬಂಧಿಸಿ 23,488 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕ್ರಿಕೆಟ್​ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಕವಲಪೇಟೆ ನಿವಾಸಿಗಳಾದ ಅಬಿದಲ್ ಚೌಧರಿ (28), ಅಬ್ದುಲ್ ರಜಾಕ್ ತಾಳಿಕೋಟಿ (29), ಗೌಸಿಯಾಟೌನ್​ನ ಮುಜಾಫರ್ ಸವಣೂರ (28), ಮಹ್ಮದ ಸಲೀಂ ಶೇಖ್ (30), ಸದರ ಸೋಪಾದ ಇಲಿಯಾಸ್ ಚೌಧರಿ (33), ದಿವಟಗಿ ಓಣಿಯ ಮಾಜೀದ್ ಖಾನ್ ಪಠಾಣ(35) ಎಂಬುವವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಟೆರೆಸ್ ಮುಂದೆ ಮಕ್ಕಳು ಆಡುವಾಗ ಎಚ್ಚರ: ಬೆಂಗಳೂರಲ್ಲಿ 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು

ನಿನ್ನೆ ಸಂಜೆ 7:30 ಗಂಟೆ ಸುಮಾರಿಗೆ ಇಲ್ಲಿನ ದಾಜೀಬಾನ್ ಪೇಟೆಯ ಎಸ್.ಟಿ. ಬಂಡಾರಿ ಕ್ರಾಸ್ ಹತ್ತಿರ ಇರುವ ಗಣಪತಿ ದೇವಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯ ಬಳಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಆಟದ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿದ್ದರು.

ಖಚಿತ ಮಾಹಿತಿ ಮೇರೆಗೆ ಉಪನಗರ ಠಾಣೆ ಇನ್ಸ್​ಪೆಕ್ಟರ್ ರವಿಚಂದ್ರ ಡಿ.ಬಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸ್ ವಿಶೇಷ ತಂಡ, ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.