ETV Bharat / city

ವಿದ್ಯುತ್ ಇಂಜಿನ್​ನಿಂದ 4 ರೈಲುಗಳ ಸಂಚಾರ ಪ್ರಾರಂಭ: ನಿತ್ಯ 5,000 ಲೀ. ಡೀಸೆಲ್ ಉಳಿತಾಯ - electric-train-started

ಮಾರ್ಚ್​ 28 ರಿಂದ 31ವರೆಗೆ ಭಾರತೀಯ ನೈರುತ್ಯ ರೈಲ್ವೆಯಿಂದ ಡೀಸೆಲ್​ ಇಂಜಿನ್​ನಿಂದ ಎಲೆಕ್ಟ್ರಿಕ್​ ಇಂಜಿನ್​ಗಳಾಗಿ ಪರಿವರ್ತೆನೆಗೊಂಡ ನಾಲ್ಕು ರೈಲುಗಳು ಎಲೆಕ್ಟ್ರಿಕ್ ಲೋಕೋಮೋಟಿವ್​ನಿಂದ ಸಂಚಾರ ಪ್ರಾರಂಭಿಸಿವೆ.

Electric engine train
ಎಲೆಕ್ಟ್ರಿಕ್​ ಇಂಜಿನ್​ ರೈಲು
author img

By

Published : Mar 31, 2022, 12:51 PM IST

ಹುಬ್ಬಳ್ಳಿ: ಪರಿಸರ ಸ್ನೇಹಿ ರೈಲ್ವೆಯಾಗುವ ನಿಟ್ಟಿನಲ್ಲಿ ಭಾರತೀಯ ನೈರುತ್ಯ ರೈಲ್ವೆಯಿಂದ ಡೀಸೆಲ್​ ಇಂಜಿನ್​ಗಳನ್ನು ಎಲೆಕ್ಟ್ರಿಕ್​ ಇಂಜಿನ್​ಗಳಾಗಿ ಬದಲಾಯಿಸಲಾಗಿದ್ದು, ಮಾರ್ಚ್​ 28ರಿಂದ ನಾಲ್ಕು ಎಲೆಕ್ಟ್ರಿಕ್​ ಇಂಜಿನ್​ ರೈಲುಗಳು ಸಂಚಾರ ಪ್ರಾರಂಭಿಸಿವೆ.

ಎಲೆಕ್ಟ್ರಿಕ್​ ಇಂಜಿನ್​ ರೈಲು ಪ್ರಾರಂಭ

ಮಾರ್ಚ್​ 28 ರಿಂದ ತಿರುಪತಿಯಿಂದ ಸೇವೆ ಪ್ರಾರಂಭ ವಾಗುವಂತೆ ಹಾಗೂ 29 ರಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ 17415/17416 ತಿರುಪತಿ - ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರ - ತಿರುಪತಿ ನಿತ್ಯ ಸೇವೆಯ ಹರಿಪ್ರಿಯ ಎಕ್ಸ್​ಪ್ರೆಸ್ ಅನ್ನು ಗುಂತಕಲ್ - ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್​ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್​ನಿಂದ ಸಂಚಾರ ಪ್ರಾರಂಭಿಸಿದೆ.

ಈ ಮೊದಲು, ಈ ರೈಲು ಪ್ರಾರಂಭದಿಂದ ಕೊನೆಯ ನಿಲ್ದಾಣದವರೆಗೆ ಅಂದರೆ ತಿರುಪತಿಯಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದವರೆಗೆ ಡೀಸೆಲ್ ಲೋಕೋಮೋಟಿವ್​ನೊಂದಿಗೆ ಸಂಚರಿಸುತ್ತಿತ್ತು.

ಮಾರ್ಚ್​ 30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಸೇವೆ ಪ್ರಾರಂಭವಾಗುವಂತೆ ಹಾಗೂ 31ರಿಂದ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ 17313/17314 ಎಸ್ಎಸ್ಎಸ್ ಹುಬ್ಬಳ್ಳಿ - ಎಂಜಿಆರ್ ಚೆನ್ನೈ ಸೆಂಟ್ರಲ್ - ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್​ಪ್ರೆಸ್, ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್​ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್​ನಿಂದ ಸಂಚಾರ ಪ್ರಾರಂಭಿಸಿದೆ. ಈ ಮೊದಲು, ಈ ರೈಲು ಗುಂತಕಲ್ ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್​ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್​ನೊಂದಿಗೆ ಸಂಚರಿಸುತ್ತಿತ್ತು.

ಇದನ್ನೂ ಓದಿ: ಅಮಿತ್ ಶಾ ಆಗಮನ ಹಿನ್ನೆಲೆ: ಈ ಭಾಗದ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್​

ಮೈಸೂರು - ಕೆಎಸ್ಆರ್ ಬೆಂಗಳೂರು – ಧರ್ಮಾವರಂ – ಗುಂತಕಲ್ – ರಾಯಚೂರು – ವಾಡಿ- ಕಲ್ಬುರ್ಗಿ ಹಾಗೂ ಸೊಲ್ಲಾಪುರಗಳ ಹರಿಪ್ರಿಯ ಎಕ್ಸ್​ಪ್ರೆಸ್ ಒಟ್ಟು 900 ಕಿ.ಮೀಗಳ ಪ್ರಯಾಣದಲ್ಲಿ ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್​ಗಳ ನಡುವೆ 574 ಕಿ.ಮೀ. ಎಲೆಕ್ಟ್ರಿಕ್ ಇಂಜಿನ್​ನೊಂದಿಗೆ ಸಂಚರಿಸುತ್ತದೆ.

ಹಾಗೆಯೇ ಎಸ್ಎಸ್ಎಸ್ ಹುಬ್ಬಳ್ಳಿ - ಎಂಜಿಆರ್ ಚೆನ್ನೈ ಸೆಂಟ್ರಲ್ - ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್​ಪ್ರೆಸ್ ಸಂಪೂರ್ಣವಾಗಿ ಎಲೆಕ್ಟ್ರಿಕ್​ ಎಂಜಿನ್​ನೊಂದಿಗೆ ಸಂಚರಿಸುತ್ತದೆ. ಈ ನಾಲ್ಕು ರೈಲುಗಳನ್ನು ಅವುಗಳ ಸೇವೆಯ ಹೆಚ್ಚಿನ ಮಾರ್ಗದಲ್ಲಿ ಎಲೆಕ್ಟ್ರಿಕಲ್ ಎಂಜಿನ್​ನೊಂದಿಗೆ ಸಂಚರಿಸುವುದರಿಂದ ನಿತ್ಯ ಸುಮಾರು 5,000 ಲೀಟರ್​ಗಳಷ್ಟು ಡೀಸೆಲ್​ನ ಉಳಿತಾಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಋತ್ಯ ರೈಲ್ವೆಯಲ್ಲಿ ಕಳೆದ ಎರಡು ಹಣಕಾಸು ವರ್ಷದಲ್ಲಿ ಪ್ರತಿ ವರ್ಷ 24 ರೈಲುಗಳಂತೆ ಒಟ್ಟು 48 ರೈಲುಗಳನ್ನು ಎಲೆಕ್ಟ್ರಿಕ್ ಇಂಜಿನ್​ನೊಂದಿಗೆ ಸಂಚರಿಸುವಂತೆ ಕಾರ್ಯಗತಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ. ವಿಜಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.