ಹುಬ್ಬಳ್ಳಿ: ರಾಜ್ಯ ಚುನಾವಣಾ ಅಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಾಳೆ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ಧಾರವಾಡ, ಕಲಘಟಗಿ ಹಾಗೂ ಅಳ್ನಾವರ ತಾಲೂಕಿನಲ್ಲಿ ನಡೆಯಲಿದೆ. ಒಟ್ಟು 48 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಅಂತಿಮವಾಗಿ 2,747 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 533 ಸದಸ್ಯ ಸ್ಥಾನಗಳಿದ್ದು, ಅದರಲ್ಲಿ 30 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 503 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಸ್ಪರ್ಧಿಸಿರುವ 1,602 ಅಭ್ಯರ್ಥಿಗಳ ಪೈಕಿ 902 ಸಾಮಾನ್ಯ ಹಾಗೂ 700 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಅಳ್ನಾವರ ತಾಲೂಕಿನ 4 ಗ್ರಾಮ ಪಂಚಾಯಿತಿಗಳಲ್ಲಿನ 16 ಕ್ಷೇತ್ರಗಳಿಗಾಗಿ ಒಟ್ಟು 47 ಸದಸ್ಯ ಸ್ಥಾನಗಳಿದ್ದು, ಅದರಲ್ಲಿ ಒಂದು ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 46 ಸದಸ್ಯ ಸ್ಥಾನಗಳಿಗಾಗಿ 156 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 88 ಸಾಮಾನ್ಯ ಹಾಗೂ 68 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳಲ್ಲಿನ 123 ಕ್ಷೇತ್ರಗಳಿಗಾಗಿ ಒಟ್ಟು 340 ಸದಸ್ಯ ಸ್ಥಾನಗಳಿದ್ದು, 17 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.