ಧಾರವಾಡ: ರಾಜ್ಯ ಸರ್ಕಾರದ ನಿರ್ದೇಶನದಂತೆ 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮ ಅಂಗವಾಗಿ ತಾಲೂಕಿನ ವನಹಳ್ಳಿ ಹಾಗೂ ಉಳಿದ ಏಳು ತಾಲೂಕಿನ ಏಳು ಗ್ರಾಮಗಳಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ 634 ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ್ದೇವೆ. ಅದರಲ್ಲಿ 224 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಮುಖ್ಯಾಂಶಗಳು:
- ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ಸ್ವೀಕರಿಸಿದ ಅರ್ಜಿಗಳು 341, ವಿಲೇವಾರಿಯಾದ ಅರ್ಜಿಗಳು 158, ಬಾಕಿ ಉಳಿದ ಅರ್ಜಿಗಳು 183.
- ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಚನ್ನಾಪೂರದಲ್ಲಿ ಸ್ವೀಕರಿಸಿದ ಅರ್ಜಿಗಳು 102, ವಿಲೇವಾರಿಯಾದ ಅರ್ಜಿಗಳು 8, ಬಾಕಿ ಉಳಿದ ಅರ್ಜಿಗಳು 94.
- ಹುಬ್ಬಳ್ಳಿ ನಗರ ತಾಲೂಕಿನ ಉಣಕಲ್ಲ ಗ್ರಾಮದಲ್ಲಿ ಸ್ವೀಕರಿಸಿದ ಅರ್ಜಿಗಳು 11, ವಿಲೇವಾರಿಯಾದ ಅರ್ಜಿಗಳು 6, ಬಾಕಿ ಉಳಿದ ಅರ್ಜಿಗಳು 5.
- ಕುಂದಗೋಳ ತಾಲೂಕಿನ ರಾಮಾಪೂರ ಗ್ರಾಮದಲ್ಲಿ ಸ್ವೀಕರಿಸಿದ ಅರ್ಜಿಗಳು 66, ವಿಲೇವಾರಿಯಾದ ಅರ್ಜಿಗಳು 9, ಬಾಕಿ ಉಳಿದ ಅರ್ಜಿಗಳು 57.
- ಅಳ್ನಾವರ ತಾಲೂಕಿನ ಅಂಬೊಳ್ಳಿ ಗ್ರಾಮದಲ್ಲಿ ಸ್ವೀಕರಿಸಿದ ಅರ್ಜಿಗಳು 18, ವಿಲೇವಾರಿಯಾದ ಅರ್ಜಿಗಳು 7, ಬಾಕಿ ಉಳಿದ ಅರ್ಜಿಗಳು 11.
- ನವಲಗುಂದ ತಾಲೂಕಿನ ಪಡೆಸೂರ ಗ್ರಾಮದಲ್ಲಿ ಸ್ವೀಕರಿಸಿದ ಅರ್ಜಿಗಳು 29, ವಿಲೇವಾರಿಯಾದ ಅರ್ಜಿಗಳು 17, ಬಾಕಿ ಉಳಿದ ಅರ್ಜಿಗಳು 12.
- ಇಂದು ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದಲ್ಲಿ ಸ್ವೀಕರಿಸಿದ ಅರ್ಜಿಗಳು 41, ವಿಲೇವಾರಿಯಾದ ಅರ್ಜಿಗಳು 4 ಮತ್ತು ಬಾಕಿ ಉಳಿದ ಅರ್ಜಿಗಳು 37.
- ಕಲಘಟಗಿ ತಾಲೂಕಿನ ಅರೇಬಸವನಕೊಪ್ಪ ಗ್ರಾಮದಲ್ಲಿ ಸ್ವೀಕರಿಸಿದ ಅರ್ಜಿಗಳು 26, ವಿಲೇವಾರಿಯಾದ ಅರ್ಜಿಗಳು 15 ಮತ್ತು ಬಾಕಿ ಉಳಿದ ಅರ್ಜಿಗಳು 11.
ಇದನ್ನೂ ಓದಿ: ಸಿಎಚ್ಒಗಳಿಗೆ ಎನ್‌ಒಸಿ ನೀಡಲು ನಕಾರ: ಆರೋಗ್ಯಾಧಿಕಾರಿ ಕಚೇರಿಯೆದುರು ಧರಣಿ
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ವಿವಿಧ ತಹಶೀಲ್ದಾರರ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು ಸ್ವೀಕರಿಸಿದ ಅಹವಾಲು ಅರ್ಜಿಗಳು 634 ಮತ್ತು ವಿಲೇವಾರಿಯಾದ ಅರ್ಜಿಗಳು 224. 410 ಅರ್ಜಿಗಳು ಬಾಕಿ ಉಳಿದಿದ್ದು, ನಿಯಮಾನುಸಾರ ಕಾಲಮಿತಿಯಲ್ಲಿ ಬಾಕಿಯಿರುವ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಿ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.