ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವ, ವಾಣಿಜ್ಯ ನಗರಿ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ಮಠದಲ್ಲಿ ಮಾರ್ಚ್ 18 ರಿಂದ ಏಪ್ರಿಲ್ 22 ರ ವರಗೆ 18,63,527 ರೂಪಾಯಿಗಳ ದೇಣಿಗೆ ಸಂಗ್ರಹವಾಗಿದೆ.
ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ ಹಾಗೂ ಶ್ರೀಸಿದ್ಧಾರೂಢ ಸ್ವಾಮಿ ಟ್ರಸ್ಟ್ ಕಮಿಟಿಯ ನೇತೃತ್ವದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ತೆರೆದು ಏಣಿಕೆ ಮಾಡಲಾಗಿದ್ದು, 35 ದಿನಗಳಲ್ಲಿಯೇ 18,63,527 ರೂಪಾಯಿ ದೇಣಿಗೆ ಸಂಗ್ರಹವಾಗಿದೆ.
ವಾಣಿಜ್ಯ ನಗರಿ ಮಾತ್ರವಲ್ಲದೇ ಧಾರವಾಡ, ಗದಗ, ಹಾವೇರಿ, ಬೆಳಗಾವಿ ಸೇರಿದಂತೆ ರಾಜ್ಯ- ಅಂತರರಾಜ್ಯದಲ್ಲಿ ಕೂಡ ಸಿದ್ಧಾರೂಢರ ಭಕ್ತರಿದ್ದು, ಈ ಬಾರಿ ಕೊರೊನಾ ಸಮಯದಲ್ಲಿಯೂ ಕೂಡ ದೊಡ್ಡ ಮಟ್ಟದಲ್ಲಿ ದೇಣಿಗೆ ಸಂಗ್ರಹವಾಗಿದೆ.
ಇನ್ನೂ ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಡಿ.ಡಿ.ಮಾಳಗಿ, ಉಪಾಧ್ಯಕ್ಷ ಜಗದೀಶ ಮಗಜಿಕೊಂಡಿ ಸೇರಿದಂತೆ ಟ್ರಸ್ಟ್ ಕಮಿಟಿಯ ಸದಸ್ಯರು ವಹಿಸಿಕೊಂಡಿದ್ದರು.