ETV Bharat / city

Credit Card Reward ಹೆಸರಲ್ಲಿ ಹುಬ್ಬಳ್ಳಿಯ ವ್ಯಕ್ತಿಗೆ 1.92 ಲಕ್ಷ ರೂ. ವಂಚನೆ!

author img

By

Published : Oct 21, 2021, 2:30 PM IST

ಕ್ರೆಡಿಟ್‌ ಕಾರ್ಡ್‌ ರಿವಾರ್ಡ್ ಹೆಸರಲ್ಲಿ ಸುಮಾರು 2 ಲಕ್ಷ ರೂ. ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

fraud in credit card reward name, fraud in credit card reward name  in Hubli, Hubli crime news, ಕ್ರೆಡಿಟ್‌ ಕಾರ್ಡ್‌ ರಿವಾರ್ಡ್​ ಹೆಸರಲ್ಲಿ ವಂಚನೆ, ಹುಬ್ಬಳ್ಳಿಯಲ್ಲಿ ಕ್ರೆಡಿಟ್‌ ಕಾರ್ಡ್‌ ರಿವಾರ್ಡ್​ ಹೆಸರಲ್ಲಿ ವಂಚನೆ, ಹುಬ್ಬಳ್ಳಿ ಅಪರಾಧ ಸುದ್ದಿ,
ಕ್ರೆಡಿಟ್‌ ಕಾರ್ಡ್‌ ರಿವಾರ್ಡ್ ಹೆಸರಲ್ಲಿ 1.92 ಲಕ್ಷ ರೂ ವಂಚನೆ

ಹುಬ್ಬಳ್ಳಿ : ಇಲ್ಲಿನ ನಿವಾಸಿಗೆ ದುಷ್ಕರ್ಮಿಗಳು ಕರೆ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್‌ಗೆ 5,250 ರೂ. ರಿವಾರ್ಡ್ ಬಂದಿದೆ. ಅದನ್ನು ಪಡೆಯದಿದ್ದರೆ ಅವಧಿ ಮುಗಿಯುತ್ತದೆ ಎಂದು ನಂಬಿಸಿ ವ್ಯಕ್ತಿಗೆ ಪಂಗನಾಮ ಹಾಕಿರುವ ಪ್ರಕರಣ ನಗರದಲ್ಲಿ ನಡೆದಿದೆ.

ವಿನಾಯಕ ಎಂಬುವರಿಂದ ವಿವಿಧ ಮಾಹಿತಿಗಳನ್ನು ಪಡೆದು ಆನ್‌ಲೈನ್ ಮೂಲಕ 1,92,800 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಹಳೇ ಹುಬ್ಬಳ್ಳಿಯ ನಿವಾಸಿಯಾಗಿರುವ ವಿನಾಯಕಗೆ ಅ.3 ರಂದು ಚಾಲಾಕಿಗಳು ಸಂದೇಶ ಕಳುಹಿಸಿದ್ದರು. ಅದರಲ್ಲಿನ ಲಿಂಕ್ ಕ್ಲಿಕ್ ಮಾಡಿ ಐಸಿಐಸಿಐ ಕ್ರೆಡಿಟ್ ಕಾರ್ಡ್​ನ ವಿವರ ಕೇಳಿದ್ದಾರೆ. ಬಳಿಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.