ದಾವಣಗೆರೆ : ಕೋವಿಡ್ ಹಾಗೂ ಒಮಿಕ್ರಾನ್ ಹಿನ್ನೆಲೆ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಅವಕಾಶವಿಲ್ಲ ಎನ್ನುವ ಅದೇಶವಿದ್ದರೂ ಕೂಡ ದಾವಣಗೆರೆಯ ಶಾಮನೂರು ಆಂಜನೇಯ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳು ತೆರೆದಿವೆ. ಜನರು ಕೂಡ ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶ ಕೇವಲ ದಾಖಲೆಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಆದೇಶ ಪಾಲನೆಯಾಗುತ್ತಿಲ್ಲ ಎನ್ನಲಾಗುತ್ತಿದೆ. ಕೆಲ ದೇವಸ್ಥಾನಗಳಿಗೆ ಪಾಲಿಕೆಯವರು ಬಂದು ಬಾಗಿಲು ಹಾಕಿಸಿದರೆ ಕೆಲ ದೇವಸ್ಥಾನಗಳು ಹಾಗೆಯೇ ದೇವರ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಿಕೊಟ್ಟಿದ್ದಾರೆ.
ಇದನ್ನೂ ಓದಿ: ನಾವೆಲ್ಲ ಒಂದೇ ಡಿಪಾರ್ಟ್ಮೆಂಟ್ ಅಲ್ವಾ?: ಮಾಸ್ಕ್ ಹಾಕಿಕೊಳ್ಳದ ಪೊಲೀಸರಿಬ್ಬರಿಗೆ ಕಾನ್ಸ್ಟೇಬಲ್ ತರಾಟೆ!
ವೀಕೆಂಡ್ ಕರ್ಪ್ಯೂ ವಿಧಿಸಲಾಗಿದೆ. ಯಾರೂ ಕೂಡ ಅನಗತ್ಯ ಓಡಾಟ ನಡೆಸಬಾರದು. ಆದೇಶ ಉಲ್ಲಂಘನೆ ಮಾಡಿದ್ರೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ, ದೇವಸ್ಥಾನಗಳು ಮಾತ್ರ ತೆರೆದಿದ್ದು, ಭಕ್ತರು ಭೇಟಿ ಕೊಡುತ್ತಿದ್ದಾರೆ.