ದಾವಣಗೆರೆ: ಜಿಲ್ಲೆಯ ಲೆನಿನ್ ನಗರದ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರ ಜನಸಂಪರ್ಕ ಕಚೇರಿ ಒಳಗಡೆ ನಿಲ್ಲಿಸಿದ್ದ ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಶುಕ್ರವಾರ ಕೆ.ಟಿ.ಜೆ ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರು ರೌಡಿಶೀಟರ್ ಸಂತೋಷ್‌ಕುಮಾರ್ ಅಲಿಯಾಸ್ ಕಣ್ವಾಗೆ ಸೇರಿದ್ದಾಗಿದೆ.
ಪಾಲಿಕೆಯ 36ನೇ ವಾರ್ಡ್ ಸದಸ್ಯೆ ನಾಗರತ್ನಮ್ಮ ಅವರ ಜನಸಂಪರ್ಕ ಕಚೇರಿ ಬಳಿ ನಿಲ್ಲಿಸಿದ್ದ ರೌಡಿಶೀಟರ್ ಸಂತೋಷ್‌ಕುಮಾರ್ ಹಾಗೂ ಆತನ ಸಹಚರರಿಗೆ ಸೇರಿದ ನಂಬರ್ ಪ್ಲೇಟ್ ಇಲ್ಲದ ಎಕ್ಸ್‌ಯುವಿ ಕಾರಿನೊಳಗಡೆ ಇದ್ದ 4 ಲಾಂಗ್ ಹಾಗೂ 50 ಗ್ರಾಂ ಖಾರದಪುಡಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಸಂತೋಷ್ ಕುಮಾರ್ ಅಲಿಯಾಸ್ ಕಣ್ವ ಹಾಗು ಆತನ ಸಹಚರರಾದ ಪರಮೇಶ್ ಅಲಿಯಾಸ್ ಪರಮಿ, ಶಿವಪ್ಪ ,ಪರಶುರಾಮ್ ಅಲಿಯಾಸ್ ಪರ್ಶಿ, ದಾದಾಪೀರ್ ಅಲಿಯಾಸ್ ದಾದು, ಮಂಜುನಾಥ ಅಲಿಯಾಸ್ ತಮ್ಮಡು, ಶ್ರೀನಿವಾಸ ಅಲಿಯಾಸ್ ಬೂಚ, ತ್ರಿಲೋಕ್ ಅಲಿಯಾಸ್ ತಿಲಕ್‌ನಾಯ್ಕ, ತ್ರಿಗುಣ ಅಲಿಯಾಸ್ ತ್ರಿಗುಣನಾಯ್ಕ ಹಾಗೂ ದಸ್ತು ವಿರುದ್ಧ ಕೆ.ಟಿ.ಜೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಪೊಲೀಸರಿಂದ ಸ್ಪೆಷಲ್ ಡ್ರೈವ್: ಮಾರಕಾಸ್ತ್ರ ಪತ್ತೆ