ದಾವಣಗೆರೆ: ಮೀಸಲಾತಿ ಪಡೆಯಲು ನಾವು ಡೆಡ್ ಲೈನ್ ಕೊಡುವುದಿಲ್ಲ, ಬದಲಾಗಿ ಲೈಫ್ ಲೈನ್ ಕೋಡುತ್ತೇವೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಅವರು 2A ಮೀಸಲಾತಿಗಾಗಿ ಈಗಾಗಲೇ ಸಮಿತಿ ರಚಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನಾವು ನೀಡಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಸೇರಿದಂತೆ ರಾಜ್ಯಾದ್ಯಂತ ಸಮಿತಿ ಈಗಾಗಲೇ ಸಮೀಕ್ಷೆ ಮಾಡಿ ಸಮಗ್ರ ಅಧ್ಯಯನ ಮಾಡ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಯಾರು ಕೋರ್ಟ್ ಮೊರೆ ಹೋಗದಂತೆ, ಕಾನೂನು ರೀತಿಯಲ್ಲಿ ತೊಡಕಾಗಬಾರದೆಂಬ ಕಾರಣಕ್ಕೆ ಸಂಪೂರ್ಣವಾಗಿ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಯಾರ ಬಳಿ ಗೋಡಾ ಹೈ, ಮೈದಾನ ಹೈ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರ್ತಾರೆ.. ಸಿಎಂ ಬೊಮ್ಮಾಯಿ
ಬೊಮ್ಮಾಯಿ ಪರ ಬ್ಯಾಟ್
ಸಿಎಂ ಬೊಮ್ಮಾಯಿ ನಮ್ಮವರೇ, ಒಳ್ಳೆ ಭರವಸೆ ಮೂಡಿಸಿದ್ದಾರೆ. ಆರು ತಿಂಗಳಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಪಂಚಮಸಾಲಿ ಪೀಠದ ವಚನಾನಂದ ಶ್ರೀ ಸಿಎಂ ಪರ ಬ್ಯಾಟ್ ಬೀಸಿದರು. ಕಿತ್ತೂರು ಕರ್ನಾಟಕ ಘೋಷಣೆ ಮಾಡಿದ್ದೇ ಸಿಎಂ ಬೊಮ್ಮಾಯಿಯವರು, ಇದಲ್ಲದೇ ಇದೇ ಬೊಮ್ಮಾಯಿಯವರು ಕಿತ್ತೂರು ಚೆನ್ನಮ್ಮ ಪ್ರಾಧಿಕಾರ ಮಾಡಿ ಹಣ ಮೀಸಲಿಟ್ಟಿದ್ದಾರೆ. ಅವರು ಅವರ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಅವರಿಗೆ ನಮ್ಮ ಪೀಠದ ಆಶೀರ್ವಾದ ಇರುತ್ತದೆ, ಸದ್ಯ ಯಾವುದೇ ಸಚಿವ ಸಂಪುಟ ಪುನಃರಚನೆಯಾಗಲ್ಲ ಎಂದು ಹೇಳಿದರು.