ದಾವಣಗೆರೆ: ಕಟರ್ನಿಂದ ಎಟಿಎಂ ಯಂತ್ರ ಕಟ್ ಮಾಡಿ ಖದೀಮರು ಲಕ್ಷಾಂತರ ರೂ. ಹಣ ದೋಚಿರುವ ಘಟನೆ ದಾವಣಗೆರೆ ನಗರದ ಬಿಐಇಟಿ ಕಾಲೇಜ್ ಬಳಿಯ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.
ತಡರಾತ್ರಿ ಎಕ್ಸಿಸ್ ಬ್ಯಾಂಕ್ಗೆ ಸೇರಿದ ಎಟಿಎಂ ಅನ್ನು ಕಟ್ ಮಾಡಿ ಕಳ್ಳರು ಹಣ ದೋಚಿದ್ದು, ಈ ಕುರಿತು ವಿದ್ಯಾನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾರೆ.
ಇನ್ನು ಎಟಿಎಂ ನಿಂದ ಎಷ್ಟು ಹಣವನ್ನು ಕಳ್ಳರು ಎಗರಿಸಿದ್ದಾರೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.