ETV Bharat / city

ಯತ್ನಾಳ್​ರಂತೆ ನನಗೂ ಸಚಿವ ಸ್ಥಾನಕ್ಕಾಗಿ ಬ್ರೋಕರ್​ಗಳು ಹಣ ಕೇಳಿದ್ರು: ಶಾಸಕ ರೇಣುಕಾಚಾರ್ಯ

author img

By

Published : May 30, 2022, 4:50 PM IST

ಯತ್ನಾಳ್​ ಆರೋಪ ಮಾಡಿರುವುದು ಸರಿಯಲ್ಲ. ಆದರೆ ಪಕ್ಷದಿಂದ ಹೊರಗೆ ಕೆಲವು ಬ್ರೋಕರ್​ಗಳು ಇದ್ದಾರೆ. ಅವರು ಈ ರೀತಿ ಸ್ಥಾನಕ್ಕಾಗಿ ಹಣ ಕೊಡಿ ಎಂದು ಸುಳ್ಳು ಹೇಳಿ ಹಣ ಮಾಡುತ್ತಾರೆ. ಅವರು ಪಕ್ಷದವರೂ ಅಗಿರುವುದಿಲ್ಲ. ನನಗೂ ಇಂತಹ ಆ ಕರೆಗಳು ಬಂದಿದ್ದವು ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.

The brokers said they would make me a minister like Yatnal M P Renukacharya
ಯತ್ನಾಳ್​ರಂತೆ ನನಗು ಸಚಿವರನ್ನಾಗಿ ಮಾಡ್ತೀವಿ ಎಂದು ಬ್ರೋಕರ್​ಗಳು ಹಣ ಕೇಳಿದ್ರು

ದಾವಣಗೆರೆ: ಯತ್ನಾಳ್​ರಂತೆ ನನಗೂ ಸಚಿವರನ್ನಾಗಿ ಮಾಡ್ತೀವಿ ಎಂದು ಬ್ರೋಕರ್​ಗಳು ಹಣ ಕೇಳಿದ್ದರು. ನನಗೆ ಅವರು ಗೊತ್ತು, ಇವರು ಗೊತ್ತು ಎಂದು ಹೇಳಿಕೊಂಡು ಬಂದಿದ್ದರು. ಆದರೆ ಬಿಜೆಪಿಯಲ್ಲಿ ಸಚಿವ ಸ್ಥಾನ ಮಾರಾಟಕ್ಕೆ ಇಲ್ಲ ಎಂದು ಹೇಳಿ ಅವರಿಗೆ ನಾನೇ ಛೀಮಾರಿ ಹಾಕಿ ಕಳಿಸಿದ್ದೆ. ಕಾಂಗ್ರೆಸ್​ನಲ್ಲಿ ಹಣ ಕೊಟ್ಟು ಬಿ ಫಾರ್ಮ್, ಸಚಿವ ಸ್ಥಾನ ಖರೀದಿ ಮಾಡುತ್ತಾರೆ. ಆದರೆ ಬಿಜೆಪಿಯಲ್ಲಿ ಈ ಸಂಸ್ಕೃತಿ ಇಲ್ಲ ಎಂದು ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಚಾರ್ಯ ಹೊಸ ಬಾಂಬ್ ಸಿಡಿಸಿದರು.‌

ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ನಮ್ಮ ಬಿಜೆಪಿಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲ. ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಬೆಳೆಸುತ್ತದೆ, ಮಧ್ಯವರ್ತಿಗಳು ಬಂದು ಕೇಳಿದ್ದರು. ಆಗ ಅವರಿಗೆ ಒದ್ದು ಜೈಲಿಗೆ ಹಾಕಿಸ್ತೀನಿ ಎಂದು ಎಚ್ಚರಿಕೆ ನೀಡಿ ಕಳಿಸಿದ್ದೆ. ಜೈಲಿಗೆ ಹೋದ ಯುವರಾಜ್ ನನ್ನ ಧರ್ಮಪತ್ನಿಗೆ ಕಾಲ್ ಮಾಡಿ ನಿಮ್ಮ ಮನೆಯವರಿಗೆ ಸಚಿವ ಸ್ಥಾನ ಕೊಡಿಸುತ್ತೇನೆ ಎಂದು ಹೇಳಿದ್ದ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಫೋಟೋ ತೆಗೆಸಿಕೊಂಡು ನನಗೆ ಅವರು ಗೊತ್ತು ಎಂದು ಹೇಳಿಕೊಳ್ಳುತ್ತಾರೆ. ಬಿಜೆಪಿಯವರೇ ಅಲ್ಲದವರು ಈ ರೀತಿ ಕೆಲಸ ಮಾಡುತ್ತಾರೆ ಎಂದರು.

ಯತ್ನಾಳ್​ರಂತೆ ನನಗೂ ಸಚಿವರನ್ನಾಗಿ ಮಾಡ್ತೀವಿ ಎಂದು ಬ್ರೋಕರ್​ಗಳು ಹಣ ಕೇಳಿದ್ರು

ಯಾರು ಆರ್​ಎಸ್​ಎಸ್​ನ ನಪುಂಸಕ ಎಂದು ಹೇಳ್ತಾರೋ ಅವರೇ ನಪುಂಸಕರು: ಯಾರು ಆರ್​ಎಸ್​ಎಸ್​ ಅನ್ನು ನಪುಂಸಕ ಸಂಘಟನೆ ಎಂದು ಹೇಳುತ್ತಾರೋ ಅವರೇ ನಪುಂಸಕರು. ಆರ್​ಎಸ್​ಎಸ್​ನವರು ಭಾರತ್ ಮಾತಾಕಿ ಜೈ ಅಂತಾರೆ. ಆದರೆ ಕಾಂಗ್ರೆಸ್​ನವರು ಭಯೋತ್ಪಾದಕರನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಜೈ ಅಂತಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.

ಹಿಜಾಬ್ ವಿಷ್ಯ ಭುಗಿಲೇಳಲು ಕಾರಣ ಕಾಂಗ್ರೆಸ್, ಕೋರ್ಟ್ ತೀರ್ಪು ನೀಡಿದರೂ ರಾಜ್ಯ ಬಂದ್ ಗೆ ಕರೆ ಕೊಡ್ತಾರೆ. ಮತಾಂಧ ಟಿಪ್ಪು ಜಯಂತಿ ಆಚರಿಸಿ, ಐದಾರು ಜನ ಹಿಂದುಗಳ ಹತ್ಯೆ ಆಯ್ತು, ಶಿವಮೊಗ್ಗದಲ್ಲಿ ಹರ್ಷನ ಕೊಲೆ ಆಯ್ತು. ಇದಕ್ಕೆಲ್ಲ ಕಾರಣ ಕಾಂಗ್ರೆಸ್. ಬಿಜೆಪಿ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕ ಹಕ್ಕು ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಟಿಕಾಯತ್​ ಮುಖಕ್ಕೆ ಮಸಿ ಬಳಿದ ಪ್ರಕರಣ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರೈತ ನಾಯಕರ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.