ದಾವಣಗೆರೆ: ನನಗೆ ನನ್ನ ಪತಿ ಗೆದ್ದಿರುವ ಖುಷಿಗಿಂತ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಹೆಚ್ಚಿನ ಖುಷಿ ತಂದಿದೆ ಎಂದು ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಗೆದ್ದು ಇತಿಹಾಸ ನಿರ್ಮಿಸಿದ ಜಿ.ಎಂ.ಸಿದ್ದೇಶ್ವರ್ ಅವರು ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಕುಟುಂಬದ ಜೊತೆ ಸೇರಿ ಗೆಲುವಿನ ಖುಷಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್, ದಾವಣಗೆರೆ ಗೆಲುವು ಖುಷಿ ಪಡೋದು ಇದ್ದೇ ಇದೆ. ಇಡೀ ಭಾರತದಲ್ಲಿ ಚುನಾವಣೆ ಎಲ್ಲಿ ಅಂದರೆ ಮಂಡ್ಯದಲ್ಲಿ ಎನ್ನುವಂತಿತ್ತು. ಸಿಎಂ ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸ ಮಾಡದೇ ಮಂಡ್ಯದಲ್ಲೇ ಇದ್ದು, ಬರೀ ದೇವಸ್ಥಾನಗಳನ್ನು ಸುತ್ತಿದರು. ಮಂಡ್ಯದಲ್ಲಿ ಸುಮಲತಾ ಗೆದ್ದಿರುವ ನ್ಯೂಸ್ ಕೇಳಿ ತುಂಬಾ ಖುಷಿಯಾಗಿದೆ. ಕರ್ನಾಟಕದ ಹೆಣ್ಣುಮಕ್ಕಳು ಖುಷಿಯಾಗಿದ್ದಾರೆ ಎಂದರು.
ನಾವು ಪ್ರಚಾರಕ್ಕೆ ಹೋದಾಗ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ತಳಮಟ್ಟದ ಕಾರ್ಯಕರ್ತರ ಸಪೋರ್ಟ್ ನಮಗೆ ಸಿಕ್ಕಿತ್ತು. ಈ ಗೆಲುವಿನಿಂದ ಖುಷಿಯಾಗಿದೆ. ಕುಟುಂಬದವರು ಎಲ್ಲಾ ಖುಷಿಯಾಗಿದ್ದಾರೆ ಎಂದರು.