ದಾವಣಗೆರೆ: ನಗರಸಭೆಯ ಬಜೆಟ್ ಮಂಡನೆಯಾದ ಬಳಿಕ ಅಧಿಕಾರಿಗಳು ಮತ್ತು ನಗರಸಭೆ ಸದಸ್ಯರಿಗೆ ಬಾಡೂಟ ಹಾಕಿಸಲಾಗಿದೆ. ಚಿಕನ್ ಕಬಾಬ್, ಚಿಕನ್ ಮಸಾಲ, ಮಟನ್ ಕರಿ, ಬೋಟಿ ಮಸಾಲ ಹಾಗು ಮೊಟ್ಟೆ ಒಳಗೊಂಡ ಊಟೋಪಚಾರವನ್ನು ಉಣಬಡಿಸಲಾಗಿದೆ. ಇದೇ ವೇಳೆ, ಸಸ್ಯಹಾರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಬಜೆಟ್ ಮುಗಿದ ತಕ್ಷಣ ಬಾಡೂಟಕ್ಕೆ ದೌಡಾಯಿಸಿದ ಅಧಿಕಾರಿಗಳು, ನಗರಸಭೆ ಸದಸ್ಯರು ಬಗೆಬಗೆಯ ಖಾದ್ಯಗಳನ್ನು ಸವಿದರು. ಹರಿಹರ ನಗರದ ಕುಡಿಯುವ ನೀರು ಸರಬರಾಜು ಕೇಂದ್ರದಲ್ಲಿ ಬಾಡೂಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ : 500 ರೂಪಾಯಿ ವೈನ್ ಆರ್ಡರ್ ಮಾಡಿ ₹50 ಸಾವಿರ ಕಳೆದುಕೊಂಡ ಯುವತಿ