ದಾವಣಗೆರೆ: ಸಾಮಾಜಿಕ ಅಂತರ ಪಾಲಿಸಿ ಎಂದು ಹೇಳುವ ಜನಪ್ರತಿನಿಧಿಗಳೇ ನಿಮಯ ಉಲ್ಲಂಘಿಸಿದ್ದಾರೆ.
ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಹಿರಿಯರ ಆರೈಕೆ ಕೇಂದ್ರದ ಶಂಕುಸ್ಥಾಪನೆ ಸಂದರ್ಭದಲ್ಲಿ ಸಚಿವರು, ಸಂಸದರು, ಶಾಸಕರು ಸಾಮಾಜಿಕ ಅಂತರ ಪಾಲಿಸದೆ ಸರ್ಕಾರದ ನಿಯಮಗಳನ್ನು ಬದಿಗೊತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ಐಜಿಪಿ ರವಿ, ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ಹನುಮಂತರಾಯ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು. ಆದರೆ, ಯಾರೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಈ ಬಗ್ಗೆ ಎಸ್ಪಿ ಅವರು ಹೇಳಿದರೂ ತಲೆಕೆಡಿಸಿಕೊಳ್ಳಲಿಲ್ಲ.
ಭೂಮಿ ಪೂಜೆ ವೇಳೆ ಸಚಿವರು ಶೂ ಧರಿಸಿದ್ದರು. ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ ಅವರು ಚಪ್ಪಲಿ ಹಾಕಿಕೊಂಡೇ ಹಾಲು-ತುಪ್ಪ ಎರೆದರು. ಪೂಜಾ ಕಾರ್ಯಕ್ರಮದ ವೇಳೆ ಸಿದ್ದೇಶ್ವರ್, ರೇಣುಕಾಚಾರ್ಯ, ಡಿಸಿ ಮಹಾಂತೇಶ್ ಅವರು ಶೂ ಬಿಚ್ಚಿಟ್ಟು ಪೂಜೆ ನೆರವೇರಿಸಿದರು.