ETV Bharat / city

ವಯಸ್ಸಿದ್ರೆ ಅಧ್ಯಕ್ಷ ಏನೂ ಸಿಎಂ ಆಗ್ತಿದ್ದೆ: ಶಾಮನೂರು ಶಿವಶಂಕರಪ್ಪ ಹಾಸ್ಯ ಚಟಾಕಿ

ವೀರಶೈವ ಮಹಾ ಸಭೆದಿಂದ ಬಿಎಸ್ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದೇವೆ, ಯಾರು ಸಿಎಂ ಆಗುತ್ತಾರೆ‌. ಏನು ಸಮಾಚಾರ ಎಂಬುದಕ್ಕೆ ಮೂರು ದಿನ ಕಾಯ್ದು ನೋಡಿ ಎಂದರು.

ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ
author img

By

Published : Jul 24, 2021, 5:55 AM IST

Updated : Jul 24, 2021, 2:22 PM IST

ದಾವಣಗೆರೆ: ವಯಸ್ಸಿದ್ದರೇ ಕೆಪಿಸಿಸಿ ಅಧ್ಯಕ್ಷ ಏನೂ ಸಿಎಂ ಆಗುತ್ತಿದ್ದೇ. ಏನ್ಮಾಡ್ಲಿ ವಯಸ್ಸಾಗಿದೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಸ್ಯ ಚಟಾಕಿ ಹಾರಿಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು ರಾಜ್ಯ ರಾಜಕೀಯ ಬಗ್ಗೆ ಇನ್ನು ಮೂರು ದಿನ ಕಾಯ್ದು ನೋಡಿ. ಎಲ್ಲಾ ನೀವೇ ಹೇಳ ಬೇಡಿ,‌ ಮೂರು ದಿನ ಕಾಯಿರಿ. ಎಲ್ಲವನ್ನು ಬಿಜೆಪಿ ಹೈಕಮಾಂಡ್ ಹೇಳುತ್ತದೆ. ನಾವು ಕೂಡಾ ವೀರಶೈವ ಮಹಾ ಸಭೆದಿಂದ ಬಿಎಸ್ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದೇವೆ, ಯಾರು ಸಿಎಂ ಆಗುತ್ತಾರೆ‌. ಏನು ಸಮಾಚಾರ ಎಂಬುದಕ್ಕೆ ಮೂರು ದಿನ ಕಾಯ್ದು ನೋಡಿ ಎಂದರು.

ಶಾಮನೂರು ಶಿವಶಂಕರಪ್ಪ ಹಾಸ್ಯ ಚಟಾಕಿ

ಇನ್ನು ಕಾಂಗ್ರೆಸ್​ನಲ್ಲಿ ಲಿಂಗಾಯತರಿಗೆ ಸಿಎಂ ಸ್ಥಾನ ಕಲ್ಪಿಸಬೇಕೆಂದು ಕೇಳಿ ಬರುತ್ತಿರುವ ಕೂಗಿಗೆ ಪ್ರತಿಕ್ರಿಯಿಸಿದ ಅವರು ನನಗೆ ವಯಸ್ಸಿದ್ದರೇ ಕೆಪಿಸಿಸಿ‌‌ ಅಧ್ಯಕ್ಷ ಏನೂ ಸಿಎಂ ಆಗುತ್ತಿದ್ದೆ. ಏನು ಮಾಡುವುದು ವಯಸ್ಸು ಇಲ್ಲ. ಇದೇ ಕಾರಣಕ್ಕೆ ಸುಮ್ಮನಿದ್ದೇನೆ. ಈಗ ಇದೆಯಲ್ಲ ಅಖಿಲಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಸ್ಥಾನ, ಅದೇ ಸ್ಥಾನ ಸಾಕು ಎಂದರು.

ಹೆಚ್​​.ಕೆ.ಪಾಟೀಲ್ ಕಿಡಿ:

ಸರ್ಕಾರ ಕೆಲಸ ಮಾಡುತ್ತಿರಬೇಕು, ಜೀವಂತವಾಗಿರಬೇಕು. ಕೊರೊನಾ ಹಾಗೂ ಪ್ರವಾಹ ಅರ್ಥಿಕ ಸಂಕಷ್ಟ ಕಾಲದಲ್ಲಿ ಸಿಎಂ ಬದಲಾವಣೆ ಬಗ್ಗೆ ಚಿಂತೆಯಾಗಿದೆ. ಇದರಿಂದ ರಾಜ್ಯದ ಜನತೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಹಿರಿಯ ಶಾಸಕ ಹೆಚ್​​.ಕೆ.ಪಾಟೀಲ್ ನಗರದಲ್ಲಿ ಬೇಸರ ವ್ಯಕ್ತಪಡಿಸಿದರು.

ಇನ್ನು ರಾಜ್ಯದಲ್ಲಿ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಕೋಟಿಗಟ್ಟಲೆ ವ್ಯವಹಾರ ಮಾಡಿರುವುದ್ದನ್ನು ಮಾಧ್ಯಮಗಳು ಬಯಲಿಗೆ ಎಳೆದಿವೆ. ಈ ರೀತಿ ನಡೆಯುತ್ತಿರುವುದು ದುರದೃಷ್ಟಕರ. ಇದನ್ನ ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಇದು ಆ ಪಕ್ಷದ ವಿಚಾರವಾಗಿದೆ. ಆದ್ರೆ ರಾಜ್ಯದಲ್ಲಿ ಸರ್ಕಾರ ಇದೇ ಅಂದ್ರೆ. ಕೆಲ್ಸಾ ಮಾಡ್ತಾ ಇರಬೇಕು. ಆದ್ರೆ ಈಗ ರಾಜ್ಯದಲ್ಲಿ ನಡೆಯುತ್ತಿರುವ ವಿಚಾರ ಏನು. ನಿಜಕ್ಕೂ ಬೇಸರದ ವಿಚಾರವಾಗಿದೆ. ಕೆಟ್ಟ ಕರಾಳವಾದ ಆಡಳಿತವನ್ನು ಬಿಜೆಪಿ ಸರ್ಕಾರ‌ ನೀಡಿದೆ. ಅದ್ದರಿಂದ‌ ಜನ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Jul 24, 2021, 2:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.