ETV Bharat / city

ಕುಂದುವಾಡ ಕರಿಬಸವೇಶ್ವರನ ಆಶೀರ್ವಾದ ಪಡೆದ ಶಾಮನೂರು ಶಿವಶಂಕರಪ್ಪ - ಶಾಮನೂರು ಶಿವಶಂಕರಪ್ಪ ನ್ಯೂಸ್

ಕರಿಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಕಡೆಯ ದಿನದ ಪ್ರಯುಕ್ತ ಪಳಾರ ಪೂಜೆ, ಮೃತ್ಯುಂಜಯ ಹೋಮ ನಡೆಸಲಾಯಿತು. ಶಾಸಕ ಶಾಮನೂರು ಶಿವಶಂಕರಪ್ಪ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

Shamanoor Sivasankarappa is visit Sri Karibasaveshwara temple at Kunduvada
ಕರಿಬಸವೇಶ್ವರನ ಆಶೀರ್ವಾದ ಪಡೆದ ಶಾಮನೂರು ಶಿವಶಂಕರಪ್ಪ
author img

By

Published : Mar 2, 2020, 4:53 AM IST

ದಾವಣಗೆರೆ: ನಗರದ ಹಳೆಯ ಕುಂದುವಾಡ ಕರಿಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಕಡೆಯ ದಿನದ ಪ್ರಯುಕ್ತ ಪಳಾರ ಪೂಜೆ, ಮೃತ್ಯುಂಜಯ ಹೋಮ ನಡೆಸಲಾಯಿತು.

ಕರಿಬಸವೇಶ್ವರನ ಆಶೀರ್ವಾದ ಪಡೆದ ಶಾಮನೂರು ಶಿವಶಂಕರಪ್ಪ

ದೇವಸ್ಥಾನದ ಧರ್ಮದರ್ಶಿ ರಾಜಪ್ಪ ಸ್ವಾಮೀಜಿ, ಪಳಾರ ಪೂಜೆ, ಹೋಮ ಹವನ ನಡೆಸಿಕೊಟ್ಟರು. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪೂಜೆಗೆ ಆಗಮಿಸಿ ಆಶೀರ್ವಾದ ಪಡೆದರು. ಹಳೇ ಕುಂದುವಾಡ ಗ್ರಾಮದ ಕರಿಬಸವೇಶ್ವರ ದೇಗುಲದಲ್ಲಿ ರಾಜಕೀಯ ಜಂಜಾಟ ಮರೆತು ಕೆಲಹೊತ್ತು ಶಾಮನೂರು ಶಿವಶಂಕರಪ್ಪ ಸಂಗೀತ ಆಲಿಸಿದರು. 30 ನಿಮಿಷಕ್ಕೂ ಹೆಚ್ಚು ಕಾಲ ದೇವರ ಭಜನೆ, ಸಂಗೀತಾ ಕೇಳಿದರು. ಬಳಿಕ ಭಕ್ತರಿಗೆ ಮಂಡಕ್ಕಿ ಹಂಚಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು‌ ತುಂಬಾ ದಿನಗಳಿಂದ ಕರಿಬಸವೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದೇನೆ, ಇಂದು ಪಳಾರ ಪೂಜೆ, ಮೃತ್ಯುಂಜಯ ಹೋಮ‌ ನಡೆಸಲಾಯಿತು. ಕರಿಬಸವೇಶ್ವರ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಆಶಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.