ETV Bharat / city

ದಾವಣಗೆರೆಯಲ್ಲಿ ಏಳು ಕೊರೊನಾ ಪಾಸಿಟಿವ್: ಸೋಂಕಿತರ‌ ಸಂಖ್ಯೆ 163ಕ್ಕೇರಿಕೆ - Davanagere new

ಇದುವರೆಗೆ 163 ಪ್ರಕರಣಗಳು ವರದಿಯಾಗಿದ್ದು, 121 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Davanagere
ದಾವಣಗೆರೆಯಲ್ಲಿ ಏಳು ಕೊರೊನಾ ಪಾಸಿಟಿವ್
author img

By

Published : Jun 3, 2020, 1:46 AM IST

ದಾವಣಗೆರೆ: ಹೆಡ್ ಪೊಲೀಸ್ ಕಾನ್​ಸ್ಟೇಬಲ್ ಸೇರಿದಂತೆ ಜಿಲ್ಲೆಯಲ್ಲಿ 7 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇವರಿಗೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದುವರೆಗೆ 163 ಪ್ರಕರಣಗಳು ವರದಿಯಾಗಿದ್ದು, 121 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 4 ಸಾವು ಸಂಭವಿಸಿದ್ದು, ಒಟ್ಟು 38 ಸಕ್ರಿಯ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರದಂದು 276 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, 772 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ಇದುವರೆಗೆ 8,982 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 8,261 ನೆಗೆಟಿವ್ ಎಂದು ವರದಿ ಬಂದಿದೆ. 16 ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಪ್ರತಿ ದಿನ ಜ್ವರ, ಐಎಲ್‍ಐ, ಸಾರಿ ಸಮೀಕ್ಷೆ ನಡೆಸಲಾಗುತ್ತಿದೆ. ಮೂರು ದಿನಗಳಿಗೊಮ್ಮೆ ಬಫರ್ ಝೋನ್‍ನಲ್ಲಿ ಸಮೀಕ್ಷೆ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ತೀವ್ರ ಉಸಿರಾಟದ ತೊಂದರೆಗೆ ಸಂಬಂಧಿಸಿದಂತೆ ಇದುವರೆಗೆ 335 ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 3 ಪಾಸಿಟಿವ್ ಪ್ರಕರಣ ಬಂದಿದ್ದು, 6 ಮಂದಿಯ ಫಲಿತಾಂಶ ನಿರೀಕ್ಷೆಯಲ್ಲಿದೆ.

ಶೀತ, ಕೆಮ್ಮು, ಜ್ವರ (ಐಎಲ್‍ಐ)ಕ್ಕೆ ಸಂಬಂಧಿಸಿದಂತೆ 634 ಪರೀಕ್ಷೆ ನಡೆಸಲಾಗಿದ್ದು, 605 ನೆಗೆಟಿವ್ ಎಂದು ವರದಿ ಬಂದಿದ್ದು, 7 ಪಾಸಿಟಿವ್ ವರದಿ ಬಂದಿದೆ. 22 ಜನರ ಸ್ಯಾಂಪಲ್ ಗಳ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.