ETV Bharat / city

ಬಿಎಸ್​ವೈ ಮೂಗಿಗೆ ತುಪ್ಪ ಸವರಿ, ಕಿವಿ ಮೇಲೆ ಹೂ ಇಟ್ಟು ಮನೇಲಿ ಕೂತಿದ್ದಾರೆ: ವಾಲ್ಮೀಕಿ ಶ್ರೀ ಗುಡುಗು - ವಾಲ್ಮೀಕಿ ಶ್ರೀಗಳಿಂದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ

ಮುಂದಿನ ತಿಂಗಳು ಫೆ.9ರೊಳಗೆ ವಾಲ್ಮೀಕಿ ಜಾತ್ರೆಯಲ್ಲಿ ನಾಯಕ ಜನಾಂಗಕ್ಕೆ ಶೇ. 7.5 ಮೀಸಲಾತಿ ಘೋಷಣೆ ಮಾಡ್ಬೇಕು, ಇಲ್ಲವಾದಲ್ಲಿ ಅದೇ ವಾಲ್ಮೀಕಿ ಜಾತ್ರೆಯಲ್ಲಿ ಐತಿಹಾಸಿಕ ತೀರ್ಮಾ‌ನ ತೆಗೆದುಕೊಳ್ಳೋದಾಗಿ ವಾಲ್ಮೀಕಿ ಶ್ರೀ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ವಾಲ್ಮೀಕಿ ಶ್ರೀ ಗುಡುಗು
ವಾಲ್ಮೀಕಿ ಶ್ರೀ ಗುಡುಗು
author img

By

Published : Jan 8, 2022, 5:49 PM IST

Updated : Jan 8, 2022, 9:17 PM IST

ದಾವಣಗೆರೆ: ಅಂದು ಸಿಎಂ ಆಗಿದ್ದ ಬಿ ಎಸ್​ ಯಡಿಯೂರಪ್ಪ ಅವರು ಇಡೀ ನಾಯಕ ಸಮುದಾಯಕ್ಕೆ ಕಿವಿಯಲ್ಲಿ ಹೂವು ಇಟ್ಟು, ಮೂಗಿಗೆ ತುಪ್ಪ ಹಚ್ಚಿದ್ರು. ಆದ್ರೆ ಈ ಬಾರಿ ನಡೆಯುವ ನಾಲ್ಕನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಶ್ರೀ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರಕ್ಕೆ ಫೈನಲ್ ಡೆಡ್ ಲೈನ್ ಕೊಟ್ಟಿದ್ದಾರೆ. ಮುಂದಿನ ತಿಂಗಳು ಫೆ.9ರೊಳಗೆ ವಾಲ್ಮೀಕಿ ಜಾತ್ರೆಯಲ್ಲಿ ನಾಯಕ ಜನಾಂಗಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡ್ಬೇಕು, ಇಲ್ಲವಾದಲ್ಲಿ ಅದೇ ವಾಲ್ಮೀಕಿ ಜಾತ್ರೆಯಲ್ಲಿ ಐತಿಹಾಸಿಕ ತೀರ್ಮಾ‌ನವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ವಾಲ್ಮೀಕಿ ಶ್ರೀ ಗುಡುಗು

ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪಿಎಂ ಹೆಚ್​ ಡಿ ದೇವೇಗೌಡರು ಭಾಗಿಯಾಗಲಿದ್ದಾರೆ. ಸರ್ಕಾರದಿಂದ ಪದೇ ಪದೇ ನಿರ್ಲಕ್ಷ್ಯ ಧೋರಣೆಯಾಗುತ್ತಿದೆ. ಡಾ. ನಾಗಮೋಹನ್ ದಾಸ್ ವರದಿ ಬಳಿಕ ಮೀಸಲಾತಿ ಘೋಷಿಸುವುದಾಗಿ ಅಂದು ಬಿಎಸ್​​ವೈ ಮಾತು ಕೊಟ್ಟಿದ್ದರು, ಆದರೆ ಮಾತು ಮರೆತು ಮೂಗಿಗೆ ತುಪ್ಪ ಸವರಿ, ಕಿವಿಯಲ್ಲಿ ಹೂ ಇಟ್ಟು ಇದೀಗ‌ ಮನೆಯಲ್ಲಿ ಕೂತಿದ್ದಾರೆ. ಬಿಎಸ್​ವೈ ಕಾಲ ವಿಳಂಬ ಮಾಡಿ ಹೋದ್ರು. ಆದರೆ, ಈ ಬಾರಿ ಮೀಸಲಾತಿ ಸಿಗದಿದ್ದರೆ ನಾವು ಐತಿಹಾಸಿಕವಾಗಿ ಗಟ್ಟಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

(ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಗೆ ಮುಹೂರ್ತ ಫಿಕ್ಸ್​: 7 ಹಂತಗಳಲ್ಲಿ ವೋಟಿಂಗ್​, ಮಾರ್ಚ್​​ 10ಕ್ಕೆ ಫಲಿತಾಂಶ)

Last Updated : Jan 8, 2022, 9:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.