ETV Bharat / city

ದೇಶದ ಅತಿ ದೊಡ್ಡ ಗ್ಲಾಸ್ ಹೌಸ್​ನಲ್ಲಿ ಫಲಪುಷ್ಪ ಪ್ರದರ್ಶನ.. ಹೂವುಗಳಲ್ಲಿ ಅರಳಿತು ಇಂಡಿಯಾ ಗೇಟ್! - davanagere flower show

ಕಾರ್ನೇಷನ್, ಲಿಲಿಯಮ್, ಆರ್ಕಿಡ್, ಗೆರ್ಬೆರಾ ಹೂವುಗಳಿಂದ 10 ಅಡಿ ಎತ್ತರದ ಹಾಗೂ 7 ಅಡಿ ಅಗಲದ 4 ಫೋಟೊ ಫ್ರೇಮ್​ಗಳನ್ನು ನಿರ್ಮಾಣ ಮಾಡಲಾಗಿದೆ. 45 ಸಾವಿರ ಹೂಗಳನ್ನು ಬಳಸಲಾಗಿದೆ. ಸುಂದರ ಹೂವಿನ ಫೋಟೊ ಪ್ರೇಮ್​ ಸೆಲ್ಫಿ ಪ್ರಿಯರ ಹಾಟ್‌ ಸ್ಟಾಟ್​​ ಆಗಿದೆ..

republic-day-flower-show-at-davanagere
ಫಲಪುಷ್ಪ ಪ್ರದರ್ಶನ
author img

By

Published : Jan 25, 2021, 8:46 PM IST

ದಾವಣಗೆರೆ : ಬೆಣ್ಣೆನಗರಿಯ ದೇಶದ ಅತಿ ದೊಡ್ಡ ಗ್ಲಾಸ್​ ಹೌಸ್​ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ 23 ರಿಂದ 26ರವೆರೆಗೆ ನಾಲ್ಕು ದಿನಗಳ ಕಾಲ ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಕಳೆದ ಬಾರಿ ಅದ್ಧೂರಿಯಾಗಿ ಫಲಪುಷ್ಪ ಪ್ರದರ್ಶನ ನಡೆಸಲಾಗಿತ್ತು. ಕೊರೊನಾ ಭಯದಿಂದ ಪ್ರದರ್ಶನ ಮಾಡಬೇಕಾ ಬೇಡ್ವಾ ಎಂಬ ಗೊಂದಲದಲ್ಲಿ ಕೊನೆಗೂ ತೋಟಗಾರಿಕೆ ಇಲಾಖೆ ಸರಳ ಫಲಪುಷ್ಟ ಪ್ರದರ್ಶನ ಹಮ್ಮಿಕೊಂಡಿದೆ.

ದೇಶದ ಅತಿ ದೊಡ್ಡ ಗ್ಲಾಸ್ ಹೌಸ್​ನಲ್ಲಿ ಫಲಪುಷ್ಪ ಪ್ರದರ್ಶನ..

ಪುಷ್ಪ ಪ್ರದರ್ಶನದ ಮುಖ್ಯ ಆಕರ್ಷಣೆ ಬಿಂದು ಅಂದ್ರೆ 'ಗೇಟ್ ವೇ ಆಫ್ ಇಂಡಿಯಾ' ಸ್ಮಾರಕ. ವಿವಿಧ ಹೂವಿನಿಂದ ಅಲಂಕೃತವಾಗಿರುವ ಗೇಟ್ ವೇ 26 ಅಡಿ ಎತ್ತರ, 17 ಅಡಿ ಅಗಲ ಹೊಂದಿದೆ.

ಈ ಗೇಟ್ ನಿರ್ಮಾಣಕ್ಕೆ 2 ಲಕ್ಷದ ಹತ್ತು ಸಾವಿರ ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಸೇವಂತಿಗೆ ಹೂವುಗಳು ಹಾಗೂ 36 ಸಾವಿರ ಕೆಂಪು ಗುಲಾಬಿ ಎಲೆಗಳನ್ನು ಬಳಸಲಾಗಿದೆ.

ಓದಿ-ನಾಮಕರಣದ ಊಟ ತಿಂದು ಒಂದೇ ಗ್ರಾಮದ 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು..

ಅಲ್ಲದೆ, ಕಾರ್ನೇಷನ್, ಲಿಲಿಯಮ್, ಆರ್ಕಿಡ್, ಗೆರ್ಬೆರಾ ಹೂವುಗಳಿಂದ 10 ಅಡಿ ಎತ್ತರದ ಹಾಗೂ 7 ಅಡಿ ಅಗಲದ 4 ಫೋಟೊ ಫ್ರೇಮ್​ಗಳನ್ನು ನಿರ್ಮಾಣ ಮಾಡಲಾಗಿದೆ. 45 ಸಾವಿರ ಹೂಗಳನ್ನು ಬಳಸಲಾಗಿದೆ. ಸುಂದರ ಹೂವಿನ ಫೋಟೊ ಪ್ರೇಮ್​ ಸೆಲ್ಫಿ ಪ್ರಿಯರ ಹಾಟ್‌ ಸ್ಟಾಟ್​​ ಆಗಿದೆ.

ಲಾಕ್​ಡೌನ್​ನಿಂದ ಮನೆಯಲ್ಲಿ ಬಂಧಿಯಾಗಿದ್ದ ಜನರು ಫಲಪುಷ್ಪ ಪ್ರದರ್ಶನ ನೋಡಲು ಗಾಜಿನ ಮನೆಯತ್ತ ತಂಡೋಪತಂಡವಾಗಿ ತೆರಳುತ್ತಿರುವುದು ನಗರದಲ್ಲಿ ಕಂಡು ಬಂತು.

ಇಷ್ಟು ದಿನ ಕೊರೊನಾ ಭೀತಿಗೆ ನಲುಗಿದ್ದ ಜನರ ಮನಸ್ಸಿಗೆ ಜಿಲ್ಲಾ ತೋಟಗಾರಿಕೆ ಇಲಾಖೆ ಫಲಪುಷ್ಟ ಪ್ರದರ್ಶನ ಮುದ ನೀಡಿದ್ದು, ಜನರು ಕುಟುಂಬದೊಂದಿಗೆ ಕೆಲ ಕಾಲ ಖುಷಿಯಿಂದ ಕಳೆಯುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.