ದಾವಣಗೆರೆ: ಕೊರೊನಾ ಸೋಂಕಿತರು ಗುಣಮುಖರಾದ್ರೂ ಡಿಸ್ಚಾರ್ಜ್ಗೆ ಹಿಂದೇಟು ಹಾಕುತ್ತಿರುವುದು ದಾವಣಗೆರೆ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಬಿಡುಗಡೆಯಾಗುವಂತೆ ಸೂಚಿಸಿದರೂ ಎರಡು ದಿನ ನಾವು ಇಲ್ಲೇ ಇರುತ್ತೇವೆ. ಹೊರಗಡೆ ಪರಿಸ್ಥಿತಿ ಸರಿ ಇಲ್ಲ. ಪೂರ್ತಿ ಗುಣಮುಖರಾಗಿಯೇ ಡಿಸ್ಚಾರ್ಜ್ ಆಗುತ್ತೇವೆ. ಬೇಕಾದರೆ ಹಣ ಕಟ್ಟುತ್ತೇವೆ ಎಂದು ಪಟ್ಟು ಹಿಡಿಯುತ್ತಿದ್ದಾರಂತೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಒಂದೆಡೆ ಬೆಡ್ ಸಮಸ್ಯೆ, ಇನ್ನೊಂದೆಡೆ ಡಿಸ್ಚಾರ್ಜ್ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಗುಣಮುಖರಾದವರ ಬಿಡುಗಡೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅವಶ್ಯ ಇರುವ ಬೆಡ್ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ ಎಂದು ತಿಳಿಸಿದರು.
ಮೊದಲ ಬಾರಿಗೆ ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ
ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಭಾನುವಾರ ಒಂದೇ ದಿನ 1,155 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 33,001ಕ್ಕೇರಿದೆ.
ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಸೋಂಕಿತ ಸಾವನ್ನಪ್ಪಿದ್ದು, ಇದುವರೆಗೂ ಒಟ್ಟು 312 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
414 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 3,656 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಹೆಂಡತಿಯ ಶ್ವಾಸನಾಳವನ್ನೇ ಇರಿದು ಕೊಂದ ಗಂಡ..