ETV Bharat / city

ಜೀವ ಕೈಯಲ್ಲಿ ಹಿಡಿದು ದಿನನಿತ್ಯ ರೈಲ್ವೆ ಹಳಿ ದಾಟುವ ಶಾಲಾ ಮಕ್ಕಳು: ಬೇಕಿದೆ ಪರಿಹಾರ

ದಾವಣಗೆರೆಯಿಂದ ಸಂತೆಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಫ್ಲೈ ಓವರ್ ಕೂಡಾ ನಿರ್ಮಾಣ ಮಾಡಲಾಗಿದ್ದು, ಈ ಅವೈಜ್ಞಾನಿಕ ಫ್ಲೈ ಓವರ್​ನಿಂದ ತೋಳಹುಣಸೆ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ.

problem-to-public-due-to-unscientific-flyover-in-davanagere
ಜೀವ ಕೈಯಲ್ಲಿ ಹಿಡಿದು ದಿನ ನಿತ್ಯ ರೈಲ್ವೆ ಹಳಿ ದಾಟುವ ಶಾಲಾ ಮಕ್ಕಳು: ಬೇಕಾಗಿದೆ ಪರಿಹಾರ
author img

By

Published : Dec 9, 2021, 12:23 PM IST

ದಾವಣಗೆರೆ: ಅದೊಂದು ಯೋಧರ‌ ಗ್ರಾಮ. ಆ ಗ್ರಾಮದಲ್ಲಿ ಯಾರೂ ಕಂಡು ಕೇಳರಿಯದ ಕಿಲೋ ಮೀಟರ್ ಉದ್ದದ ಅವೈಜ್ಞಾನಿಕ ಫ್ಲೈ‌ಓವರ್​ ನಿರ್ಮಾಣ ಮಾಡಲಾಗಿದ್ದು, ಆ ಫ್ಲೈ ಓವರ್ ಕೆಳಗೆ ಹಾದು ಹೋಗಿರುವ ರೈಲು ಮಾರ್ಗವನ್ನು ಮಕ್ಕಳು, ವೃದ್ಧರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ದಾಟುವ ಪರಿಸ್ಥಿತಿ ನಿರ್ಮಾಣ‌ವಾಗಿದೆ. ಇಲ್ಲಿ ಜನರು ಸಂಚರಿಸಲು ಪುಟ್ಟ ಮೇಲ್ಸೇತುವೆ ಅಥವಾ ಅಂಡರ್​​ಪಾಸ್ ನಿರ್ಮಾಣ ಮಾಡದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ಆಗಿದೆ.

ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದಲ್ಲಿ ಮೂರು ಸಾವಿರ ಜನಸಂಖ್ಯೆಯಿದ್ದು, ಇಲ್ಲಿ ದಾವಣಗೆರೆಯಿಂದ ಸಂತೆಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಫ್ಲೈ ಓವರ್ ಕೂಡಾ ನಿರ್ಮಾಣ ಮಾಡಲಾಗಿದೆ. ದುರಂತವೆಂದರೆ ಈ ಫ್ಲೈಓವರ್ ಕೆಳಗೆ ಹಾದು ಹೋಗಿರುವ ರೈಲ್ವೆ ಹಳಿಗೊಂದು ಪುಟ್ಟ ಮೇಲ್ಸೇತುವೆ ಇಲ್ಲವೇ ಅಂಡರ್ ಪಾಸ್ ನಿರ್ಮಾಣ ಮಾಡದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ಆಗಿದೆ.

ಅವೈಜ್ಞಾನಿಕ ಫ್ಲೈ ಓವರ್​ನಿಂದ ಸಮಸ್ಯೆ

ಇದಲ್ಲದೇ ಇಲ್ಲಿ ಸಾವಿರಾರು ಜನ ಪ್ರತಿನಿತ್ಯ ರೈಲ್ವೆ ಹಳಿದಾಟಿ ತಮ್ನ ತಮ್ಮ ಕೆಲಸಕ್ಕೆ ತೆರಳಬೇಕಾಗಿದ್ದು, ನೂತನವಾಗಿ ನಿರ್ಮಾಣವಾಗಿರುವ ಬ್ರಿಡ್ಜ್​​ನಿಂದ ಗ್ರಾಮಸ್ಥರ ಗೋಳು ಹೇಳತೀರದಾಗಿದ್ದು, ಶಾಲಾ ಮಕ್ಕಳು, ವೃದ್ದರಂತೂ ಜೀವ ಬಿಗಿಹಿಡಿದು ರೈಲ್ವೆ ಹಳಿಗಳನ್ನು ದಾಟುವ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕರು ರೈಲ್ವೆ ಬಳಿಯ ಒಂದು ಬದಿಯಿಂದ ಇನ್ನೊಂದು ಬದಿ ದಾಟದಿದ್ದರೆ, ಸರಿಸುಮಾರು 1.4 ಕಿ.ಮೀ ಸುತ್ತಿಕೊಂಡು ಬರುವ ಪರಿಸ್ಥಿತಿ ಇದೆ.

ಕಿ.ಮೀ ಉದ್ದ ಇರುವ ಫ್ಲೈ ಓವರ್ ಊರಿನ ಮೇಲಿಂದ ಹಾದು ಹೋಗಿದೆ. ದಾವಣಗೆರೆಗೆ ತೆರಳುವ ಬಸ್​​ಗಳು ಈ ಫ್ಲೈ ಓವರ್ ಮೇಲಿಂದ ಹಾದು ಹೋಗುತ್ತಿರುವುದರಿಂದ ಬಸ್ ಹಿಡಿಯಲು ಸುಮಾರು ಎರಡು ಕಿ.ಮೀ‌ ಸುತ್ತು ಹಾಕಿ ಬರುವ ಪರಿಸ್ಥಿತಿ ಇಲ್ಲಿದೆ. ಈ ಕುರಿತಂತೆ ರೈಲ್ವೆ ಅಧಿಕಾರಿಗಳಿಗೆ, ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಈ ಬಗ್ಗೆ ದೂರು ಕೊಟ್ಟು ಗಮನ ಸೆಳೆಯಲಾಗಿತ್ತು. ಎಲ್ಲರೂ ವಾಸ್ತವ ಅರಿತು ಇದಕ್ಕೊಂದು ಪರಿಹಾರ ಮಾಡೋಣ ಎಂದು ಆಶ್ವಾಸನೆ ನೀಡಿದ್ದಾರೆಯೇ ವಿನಃ ಅದನ್ನು ಕಾರ್ಯಗತಗೊಳಿಸಲು ಯಾರೂ ಮುಂದಾಗಿಲ್ಲ ಎಂಬುದು ಸ್ಥಳೀಯರ ಅಳಲು.

ಅವೈಜ್ಞಾನಿಕ ಬ್ರಿಡ್ಜ್​​ನಿಂದ ಯಾರಿಗಾದರೂ ಸಾವು-ನೋವು ಸಂಭವಿಸಿದರೆ ಉಗ್ರ ಹೋರಾಟ ಮಾಡುವುದಾಗಿ ತೋಳಹುಣಸೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಬಾರ್ ಮಾಲೀಕನ ಹತ್ಯೆ ಸಂಚು: ಆರ್​ಟಿಐ ಕಾರ್ಯಕರ್ತ ಸೇರಿ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.