ETV Bharat / city

'ಮೀಸಲಾತಿಯನ್ನು ಫುಟ್ಬಾಲ್ ಮಾಡಿಕೊಂಡ್ರೆ, ನಿಮ್ಮನ್ನು ನನ್ನ ಸಮುದಾಯ ಕಿಕ್ ಔಟ್ ಮಾಡುತ್ತೆ' - Prasananandapuri swamiji latest news

ಮೀಸಲಾತಿ ನೀಡಲು ವರದಿ ಆಯಿತು. ಸಬ್ ಕಮಿಟಿ ಆಯಿತು. ಇವಾಗ ಉನ್ನತ ಕಮಿಟಿ ಮಾಡಿದ್ದಾರಂತೆ. ಮೀಸಲಾತಿ ಎಂಬ ಫುಟ್ಬಾಲ್ ಅನ್ನು ಗೋಲಿಗೆ ಹಾಕಬೇಕು. ಆದರೆ ಈ ಸರ್ಕಾರ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಮೀಸಲಾತಿ ವರದಿಯನ್ನು ಸಬ್ ಕಮಿಟಿ, ಸಬ್ ಕಮಿಟಿಯಿಂದ ಉನ್ನತ ಕಮಿಟಿಗೆ ಫುಟ್ಬಾಲ್ ರೀತಿಯಲ್ಲಿ ಒದೆಯುತ್ತಿದೆ. ಸರ್ಕಾರ ಮೀಸಲಾತಿ ವಿಚಾರದಲ್ಲಿ ಸಮುದಾಯವನ್ನು ಫುಟ್ಬಾಲ್ ಮಾಡಿಕೊಂಡ್ರೇ, ನನ್ನ ಸಮುದಾಯ ನಿಮ್ಮನ್ನು ಕಿಕ್ ಔಟ್ ಮಾಡುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀ ಹೇಳಿದರು.

Prasananandapuri swamiji on reservation
ವಾಲ್ಮೀಕಿ ಶ್ರೀ
author img

By

Published : Nov 9, 2021, 9:02 PM IST

ದಾವಣಗೆರೆ: ಸರ್ಕಾರ ಮೀಸಲಾತಿ ವಿಚಾರದಲ್ಲಿ ಸಮುದಾಯವನ್ನು ಫುಟ್ಬಾಲ್ ಮಾಡಿಕೊಂಡ್ರೇ, ನನ್ನ ಸಮುದಾಯ ನಿಮ್ಮನ್ನು ಕಿಕ್ ಔಟ್ ಮಾಡುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀ ಗುಡುಗಿದರು.

ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳನ್ನು ಮಲಗಲು ಬಿಡಬಾರದು. ಸರ್ಕಾರಕ್ಕೆ ಮಲಗಲು ಬಿಟ್ಟರೆ ಮತ್ತೆ ಆರು ತಿಂಗಳು ಕಾಯಬೇಕಾಗುತ್ತದೆ. ಈ ನಾಡಿನ ದೊರೆಯ ಪವರ್ ಅಧಿಕಾರಿಂದ ನಮ್ಮನ್ನು ಅವರು ಮಾತನಾಡಿಸುತ್ತಿಲ್ಲ. ಎಸ್​ಸಿ/ಎಸ್ಟಿ ವರ್ಗದ ಮಕ್ಕಳಿಗೆ ಶಿಕ್ಷಣ ಹಾಗು ಉದ್ಯೋಗದಲ್ಲಿ ಮೀಸಲಾತಿ ನೀಡಲು ಈ ಸರ್ಕಾರ ವಿಳಂಬ ಮಾಡುತ್ತಿದೆ ಎಂದರು.

ಮೀಸಲಾತಿ ನೀಡಲು ವರದಿ ಆಯಿತು. ಸಬ್ ಕಮಿಟಿ ಆಯಿತು. ಇವಾಗ ಉನ್ನತ ಕಮಿಟಿ ಮಾಡಿದ್ದಾರಂತೆ. ಮೀಸಲಾತಿ ಎಂಬ ಫುಟ್ಬಾಲ್ ಅನ್ನು ಗೋಲಿಗೆ ಹಾಕಬೇಕು. ಆದರೆ ಈ ಸರ್ಕಾರ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಮೀಸಲಾತಿ ವರದಿಯನ್ನು ಸಬ್ ಕಮಿಟಿ, ಸಬ್ ಕಮಿಟಿಯಿಂದ ಉನ್ನತ ಕಮಿಟಿಗೆ ಫುಟ್ಬಾಲ್ ರೀತಿಯಲ್ಲಿ ಒದೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತ ನ್ಯಾ.ನಾಗಮೋಹನ್ ದಾಸ್ ವರದಿ ಬರಲಿ ತಕ್ಷಣ ಮೀಸಲಾತಿ ನೀಡ್ತಿವಿ ಎಂದು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು. ಆದರೆ ಮೂರನೇ ವಾಲ್ಮೀಕಿ ಜಾತ್ರೆಗೆ ಆಗಮಿಸಿದಾಗ ಬಿ.ಎಸ್.ಯಡಿಯೂರಪ್ಪ ಕಿವಿ ಮೇಲೆ ಹೂವು ಇಟ್ಟು ಅನುಷ್ಠಾನಕ್ಕೆ ತರುತ್ತೇವೆ ಎಂದಿದ್ದರು ಅದೂ ಆಗಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಚುನಾವಣಾ ಸಂಧರ್ಭದಲ್ಲಿ ಎಸ್​ಸಿ/ಎಸ್ಟಿ ಸಮುದಾಯವನ್ನು ಬಳಸಿಕೊಳ್ಳುವ ಇವರಿಗೆ ಬುದ್ಧಿ ಕಲಿಸಬೇಕಾಗಿದೆ. ಹಾನಗಲ್ ಉಪಚುನಾವಣೆಯಲ್ಲಿ ಏನಾಯಿತು ಎಂಬುದು ಅವರಿಗೆ ತಿಳಿದಿದೆ. 18 ಸಾವಿರ ಮತದಾರರು ಕೈ ಕೊಟ್ಟಿದ್ದಾರೆ. ಇದರ ಸಂದೇಶ ಎಲ್ಲಿ ಹೋಗಬೇಕೋ ಅಲ್ಲಿಗೆ ಹೋಗಿದೆ. ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆ ಬರಲಿವೆ. ಆಗ ಈ ಸರ್ಕಾರದವರು ನಮ್ಮ ಬಳಿ ಬರಲೇಬೇಕು ಎಂದರು.

ಇದನ್ನೂ ಓದಿ: ನ.11ರಂದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಿಸಲು ಸರ್ಕಾರದ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.