ETV Bharat / city

ಟ್ರ್ಯಾಕ್ಟರ್​ನಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿ ಸಾಗಾಟ... 400 ಜಿಲೆಟಿನ್ ಕಡ್ಡಿ ವಶ - ದಾವಣಗೆರೆ 400 ಜಿಲೆಟಿನ್ ಕಡ್ಡಿ ವಶ

ಅಪಾಯಕಾರಿ ಸ್ಫೋಟಕಗಳನ್ನು ಸಾಗಾಟ ಮಾಡಬೇಕಾದರೆ ಅದಕ್ಕೆ ಪರವಾನಗಿ ಮುಖ್ಯ. ಪರವಾನಗಿ ಇಲ್ಲದೆ ಅಕ್ರಮವಾಗಿ ಜಿಲೆಟಿನ್​ ಕಡ್ಡಿಗಳು ಸೇರಿದಂತೆ ಇತರೆ ಸ್ಫೋಟಕಗಳನ್ನು ಟ್ರ್ಯಾಕ್ಟರ್​ನಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ಹಿಡಿದು ವಶಪಡಿಸಿಕೊಂಡ ಘಟನೆ ನಡೆದಿದೆ.

illegal explosive
ಸ್ಪೋಟಕ
author img

By

Published : Jun 17, 2021, 12:50 PM IST

ದಾವಣಗೆರೆ: ಅಕ್ರಮವಾಗಿ ಸ್ಫೋಟಕ ವಸ್ತುಗಳ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪರವಾನಗಿ ಇಲ್ಲದೆ ಅಕ್ರಮವಾಗಿ ಜಿಲೆಟಿನ್ ಕಡ್ಡಿ ಸೇರಿದಂತೆ ಸ್ಫೋಟಕ ಸಾಮಗ್ರಿಗಳ ಸಾಗಾಟ ದಂಧೆಯ ಮೇಲೆ ದಾವಣಗೆರೆಯ ಪೊಲೀಸರು ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಆಲೂರು ಗ್ರಾಮದಲ್ಲಿ ದಾವಣಗೆರೆಯ ಐಜಿ ಸ್ಕ್ವಾಡ್​ನಿಂದ ದಾಳಿ ನಡೆದಿದೆ. ಇದೇ ಗ್ರಾಮದ ಬಳಿ ಟ್ರ್ಯಾಕ್ಟರ್​ನಲ್ಲಿ ಸ್ಫೋಟಕಗಳ ಸಾಗಿಸುತ್ತಿದ್ದನ್ನು ಖಚಿತ ಮಾಹಿತಿ ಮೇರೆಗೆ ಡಿವೈಎಸ್​ಪಿ ತಿರುಮಲೇಶ್ ನೇತೃತ್ವದ ತಂಡದಿಂದ ದಾಳಿ ನಡೆಸಿ 100 ಡಿಟೋನೇಟರ್, 400 ಜಿಲೆಟಿನ್ ಕಡ್ಡಿ ಸೇರಿದಂತೆ ಹಲವು ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

davangere
ವಶಪಡಿಸಿಕೊಂಡ ಸ್ಫೋಟಕ ಸಾಮಗ್ರಿ

ಇನ್ನು ಟ್ರ್ಯಾಕ್ಟರ್ ಚಾಲಕ ಶಿವಕುಮಾರ್ ಎಂಬುವನನ್ನು ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಈ ಸ್ಫೋಟಕಗಳನ್ನು ಬಾಗಲಕೋಟೆಯಿಂದ ದಾವಣಗೆರೆಗೆ ರವಾನಿಸಲಾಗುತ್ತಿತ್ತು ಎಂಬ ಮಾಹಿತಿಯನ್ನು ಪೋಲಿಸರು ಕಲೆಹಾಕಿದ್ದಾರೆ. ಇದರ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.