ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಅಣೆಕಟ್ಟು ತುಂಬಿ ಹರಿಯುತ್ತಿದೆ. ಅಣೆಕಟ್ಟಿನ ಹಿನ್ನೀರಿಗೆ ಹೊಂದಿಕೊಂಡಿರುವ ಜಮೀನು ಮತ್ತು ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ. ಭಾರಿ ಮಳೆಗೆ ಮುಳುಗಡೆಗೊಂಡಿದ್ದ ಪ್ರದೇಶದಲ್ಲಿನ ತೋಟದ ಮನೆಯಲ್ಲಿ ಸಿಲುಕಿದ್ದ ಜಾನುವಾರು ಮತ್ತು ನಾಯಿ ಹಾಗೂ ಅದರ ಮರಿಗಳನ್ನು ರಕ್ಷಿಸಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಡ್ಡೇರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಯಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಪರದಾಡುತ್ತಿರುವುದನ್ನು ಕಂಡ ಸ್ಥಳೀಯರು ತೆಪ್ಪದ ಮೂಲಕ ತೆರಳಿ ನಾಯಿ ಮತ್ತು ನಾಯಿ ಮರಿಗಳನ್ನು ರಕ್ಷಿಸಿದ್ದಾರೆ.
ಭಾರಿ ಮಳೆಗೆ ಮುಳುಗಡೆಯಾಗಿದ್ದ ಪ್ರದೇಶದ ತೋಟದ ಮನೆಯಲ್ಲಿ ನಾಯಿ ಮತ್ತು ನಾಯಿ ಮರಿಗಳನ್ನು ಬಿಟ್ಟು ಮನೆಯ ಮಾಲೀಕ ತೆರಳಿದ್ದು, ಅನ್ನ-ನೀರು ಇಲ್ಲದೇ ತೋಟದ ಮನೆಯಲ್ಲಿ ಕಂಗಾಲಾಗಿದ್ದ ನಾಯಿ ಹಾಗೂ ಅದರ ನಾಯಿ ಮರಿಗಳನ್ನು ಸ್ಥಳೀಯರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಓದಿ : ಶಿವಮೊಗ್ಗ: ಕೆರೆ ನಡುಗಡ್ಡೆಯಲ್ಲಿ ಸಿಲುಕಿದ್ದ 13 ಕುದುರೆಗಳ ರಕ್ಷಣೆ