ETV Bharat / city

ಕಳ್ಳತನಕ್ಕೆ ಬಂದ 3 ಖದೀಮರು.. ಮನೆ ಮಾಲೀಕ ಎಚ್ಚರವಾಗ್ತಿದ್ದಂತೆ ಓರ್ವ ಬಿದ್ದು ಸತ್ತ, ಇನ್ನಿಬ್ಬರು ಪರಾರಿ.. - one thief died in davanagere

ಇಂದು ಬೆಳಗಿನ ಜಾವ 3 ಗಂಟೆಗೆ ಕೆಟಿಜೆನಗರದ ಮನೆಯೊಂದಕ್ಕೆ ಕಳ್ಳತನಕ್ಕಾಗಿ ಬಂದಿದ್ದ ಮೂವರು ಕಳ್ಳರು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮನೆ ಮಾಲೀಕ ಎಚ್ಚರಗೊಂಡಿದ್ದು, ಭಯಭೀತರಾದ ಮೂವರು ಕಳ್ಳರು ಪರಾರಿಯಾಗಲು ಮನೆಯ ಮಹಡಿ ಮೇಲಿಂದ ಜಿಗಿದಿದ್ದಾರೆ..

out-of-three-thieves-one-thief-died-while-escaping-from-the-house
ಕಳ್ಳತನಕ್ಕೆಂದು ಬಂದು ಮನೆ ಮೇಲಿಂದ ಬಿದ್ದ ಕಳ್ಳ ಸಾವು, ಮನೆ ಮಾಲೀಕ ಎಚ್ಚರಗೊಂಡಿದಕ್ಕೆ ನಡೆಯಿತು ಅನಾಹುತ
author img

By

Published : May 25, 2022, 2:37 PM IST

ದಾವಣಗೆರೆ : ಮನೆಗೆ ಕನ್ನ ಹಾಕಲು ಬಂದ ಮೂವರು ಕಳ್ಳರು, ಮನೆ‌ ಮಾಲೀಕ ಎಚ್ಚರಿಗೊಂಡು ಕೂಗಿದ್ದೇ ತಡ ಮನೆ ಮೇಲಿಂದ ಜಿಗಿದು ಪರಾರಿಯಾಗಲು ಯತ್ನಿಸಿದ ಸಂದರ್ಭ ಮೂವರು ಕಳ್ಳರ ಪೈಕಿ ಓರ್ವ ಸಾವನಪ್ಪಿ, ಇಬ್ಬರು ಪರಾರಿಯಾಗಿರುವ ಘಟನೆ ದಾವಣಗೆರೆಯ ಕೆಟಿಜೆನಗರದಲ್ಲಿ ನಡೆದಿದೆ. ಸಾವನಪ್ಪಿರುವ ಕಳ್ಳನನ್ನು ದಾವಣಗೆರೆಯ ನಿವಾಸಿ ಪರಶುರಾಮ್ ಎಂದು ಗುರುತಿಸಲಾಗಿದೆ.

ಇಂದು ಬೆಳಗಿನ ಜಾವ 3 ಗಂಟೆಗೆ ಕೆಟಿಜೆನಗರದ ಮನೆಯೊಂದಕ್ಕೆ ಕಳ್ಳತನಕ್ಕಾಗಿ ಬಂದಿದ್ದ ಮೂವರು ಕಳ್ಳರು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮನೆ ಮಾಲೀಕ ಎಚ್ಚರಗೊಂಡಿದ್ದು, ಭಯಭೀತರಾದ ಮೂವರು ಕಳ್ಳರು ಪರಾರಿಯಾಗಲು ಮನೆಯ ಮಹಡಿ ಮೇಲಿಂದ ಜಿಗಿದಿದ್ದಾರೆ.

ಇದರಲ್ಲಿ ಇಬ್ಬರು ಕಳ್ಳರು ಪರಾರಿಯಾಗಿದ್ದು, ಓರ್ವ ಕಳ್ಳ ಮಹಡಿ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನಪ್ಪಿದ್ದಾನೆ. ಸದ್ಯ ‌ಸ್ಥಳಕ್ಕೆ‌ ಎಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಟಿಜೆ‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಇನ್ನಿಬ್ಬರು ಕಳ್ಳರನ್ನು ಪತ್ತೆ ಹಚ್ಚಲು ಕೆಟಿಜೆನಗರ ಪೊಲೀಸರು ಬಲೆ‌ ಬೀಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಓದಿ : ಸಾರಿ, ಸಾರಿ ಎಂದು ಗೀಚಿದ್ದ ಯುವಕರ ಚಹರೆ ಪತ್ತೆ: ಡಿಸಿಪಿ ಡಾ.ಸಂಜೀವ್​ ಪಾಟೀಲ್​

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.