ETV Bharat / city

ಮದ್ಯ ಮಾರಾಟ ಆರೋಪ, ಬಾರ್​ ಮೇಲೆ ಅಧಿಕಾರಿಗಳ ದಾಳಿ - ಅಬಕಾರಿ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ದಾಳಿ

ಹರಿಹರದ ಹಳೆ ಪಿ ಬಿ ರಸ್ತೆಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಲಾಕ್​ಡೌನ್ ಆದೇಶ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅಬಕಾರಿ ಇಲಾಖೆ ಮತ್ತು ಪೊಲೀಸ್​ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Officers attack Raj Bhavan bar and restaurant harihara
ರಾಜ್ ಭವನ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಅಧಿಕಾರಿಗಳ ದಾಳಿ
author img

By

Published : Apr 22, 2020, 8:10 PM IST

Updated : Apr 22, 2020, 9:58 PM IST

ಹರಿಹರ: ನಗರದ ಹಳೆ ಪಿ ಬಿ ರಸ್ತೆಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ ನಡೆದಿದೆ. ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದರು.

ನಗರದ ಕೆಲವು ಮದ್ಯದ ಅಂಗಡಿಗಳಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ದೂರು ಬರುತ್ತಿರುವ ಹಿನ್ನೆಲೆ, ಜಿಲ್ಲಾಧಿಕಾರಿ ಮಹಾಂತೇಶ ಬೀಳಿಗಿಯವರು ತಾಲೂಕು ಅಧಿಕಾರಿಗಳಿಗೆ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಕೆಲವು ಮದ್ಯದ ಅಂಗಡಿಗಳಿಗೆ ಎರಡೆರಡು ಬಾಗಿಲು ಹೊಂದಿರುವ ಅನುಮಾನ ಬಂದಿದ್ದು, ರೆಸ್ಟೋರೆಂಟ್ ಮುಂಬಾಗಿಲು ಸೀಜ್ ಆಗಿದ್ದರೂ ಹಿಂಬಾಗಿಲಿನಿಂದ ಅಕ್ರಮವಾಗಿ ಮಾರಾಟ ಮಾಡಿರಬಹುದು ಎಂದು ಮದ್ಯದ ಅಂಗಡಿಯ ಮೇಲೆ ದಾಳಿ ನಡೆಸಲಾಗಿದೆ. ಪರಿಶೀಲಿಸಿದರು.

ಲಾಕ್ ಡೌನ್ ಘೋಷಣೆಯಾದ ಮಾ. 21ರ ಸಂಜೆಯಿಂದ ಮದ್ಯ ಮಾರಾಟ ಮಾಡಿರುವ ಲೆಕ್ಕ ಸಿಗುತ್ತಿಲ್ಲ. ಅಲ್ಲದೇ ಅಂದು ಮಾರಾಟ ಮಾಡಿರುವ ಮದ್ಯ ಎಷ್ಟು ಎಂಬುದಕ್ಕೆ ಬಿಲ್ ಇರದ ಕಾರಣ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾಳಿಯಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಸಿಪಿಐ ಶಿವ ಪ್ರಸಾದ್, ಅಬಕಾರಿ ಇಲಾಖೆಯ ಅಧಿಕಾರಿಗಳ ಇದ್ದರು.

Last Updated : Apr 22, 2020, 9:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.