ETV Bharat / city

ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ: ಬಿಜೆಪಿ ಕಾರ್ಯಕ್ರಮದಲ್ಲೇ ರೂಲ್ಸ್​ ಬ್ರೇಕ್​ - No mask at BJP event in Davanagere

ಕೊರೊನಾ ಮತ್ತೆ ಕಾಣಿಸಿಕೊಳ್ಳುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಮಾಸ್ಕ್​ ಕಡ್ಡಾಯ ಮಾಡಿದೆ. ಆದರೆ, ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರೇ ಮಾಸ್ಕ್​ ಹಾಕದೆ ಸರ್ಕಾರ ನಿಯಮ ಮುರಿದರು.

no-mask
ರೂಲ್ಸ್​ ಬ್ರೇಕ್​
author img

By

Published : Apr 26, 2022, 3:42 PM IST

ದಾವಣಗೆರೆ: ಕೊರೊನಾ 4ನೇ ಅಲೆಯ ಭೀತಿಯಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ರಾಜ್ಯದಲ್ಲಿ ಸಾರ್ವಜನಿಕವಾಗಿ ಮಾಸ್ಕ್​ ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ. ಆದರೆ, ನಗರದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರೇ ಮಾಸ್ಕ್​ ಧರಿಸದೇ ಭಾಗವಹಿಸಿ, ಸರ್ಕಾರದ ನಿಯಮ ಗಾಳಿಗೆ ತೂರಿದ್ದಾರೆ.

ಇಂದು ದಾವಣಗೆರೆಯಲ್ಲಿ ‌ನಡೆದ ಆತ್ಮನಿರ್ಭರ್ ಕೃಷಿ ಮತ್ತು ಸಿರಿಧಾನ್ಯಗಳ ವರ್ಷಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್, ಜಗಳೂರು ಶಾಸಕ ಎಸ್‌.ವಿ.ರಾಮಚಂದ್ರಪ್ಪ, ಎಸ್​.ಎ.ರವೀಂದ್ರನಾಥ್ ಹಾಗೂ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ದಾವಣಗೆರೆ ಹೊರವಲಯದಲ್ಲಿರುವ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲೂ ಭಾಗಿಯಾದ ನಾಯಕರು ಇಲ್ಲಿಯೂ ಮಾಸ್ಕ್​ ಧರಿಸಿರಲಿಲ್ಲ. ಈ ಇದೇ ವೇಳೆ ಸಂಸದ ಭೀಮಣ್ಣ ಕಡಾಡಿ ಕೂಡಾ ಸೇರಿಕೊಂಡರು. 200ಕ್ಕೂ ಹೆಚ್ಚು ಕಾರ್ಯಕರ್ತರು ಕೂಡ ಗುಂಪುಗುಂಪಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಸ್ಕ್ ಹಾಕದೇ ಕುಳಿತಿದ್ದರು.

ಇದನ್ನೂ ಓದಿ: ಕೊರೊನಾ ನಾಲ್ಕನೇ ಅಲೆಗೆ ಹೆದರಬೇಡಿ, ಜಾಗ್ರತೆ ವಹಿಸಿ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.