ETV Bharat / city

ನವೀನ್ ಮೃತದೇಹ ಆಸ್ಪತ್ರೆಗೆ ದಾನವಾಗಿ ನೀಡುತ್ತಿರುವ ಪೋಷಕರ ಕಾರ್ಯ ಶ್ಲಾಘನೀಯ: ಎಸ್​ ಎಸ್​ ಮಲ್ಲಿಕಾರ್ಜುನ್ - s s hospital davanagere

ಉಕ್ರೇನ್​ನಲ್ಲಿ ಹತನಾದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ದಾನವಾಗಿ ಪಡೆಯುವ ಬಗ್ಗೆ ಎಸ್.ಎಸ್. ಆಸ್ಪತ್ರೆಯ ಆಡಳಿತ ಮಂಡಳಿ ಮುಖ್ಯಸ್ಥ ಎಸ್.ಎಸ್. ಮಲ್ಲಿಕಾರ್ಜುನ್ ಖಚಿತ ಪಡಿಸಿದ್ದಾರೆ.

naveen dead body donate to s s hospital davanagere
ಎಸ್.ಎಸ್. ಮಲ್ಲಿಕಾರ್ಜುನ್
author img

By

Published : Mar 20, 2022, 9:17 PM IST

ದಾವಣಗೆರೆ: ಉಕ್ರೇನ್​ನಲ್ಲಿ ಹತನಾದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ದಾವಣಗೆರೆ ಎಸ್.ಎಸ್. ಆಸ್ಪತ್ರೆಗೆ ದಾನವಾಗಿ ನೀಡಲು ಪೋಷಕರು ನಿರ್ಧರಿಸಿದ್ದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಮುಖ್ಯಸ್ಥ ಎಸ್​ ಎಸ್​ ಮಲ್ಲಿಕಾರ್ಜುನ್​ ಸ್ವಾಗತಿಸಿದ್ದಾರೆ.

ನವೀನ್ ಮೃತದೇಹ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾನವಾಗಿ ನೀಡಲು ನಿರ್ಧಾರ- ಎಸ್​ ಎಸ್​ ಮಲ್ಲಿಕಾರ್ಜುನ ಶ್ಲಾಘನೆ

ಮೃತ ದೇಹವನ್ನು ದಾನವಾಗಿ ನೀಡುವ ಬಗ್ಗೆ ದಾವಣಗೆರೆಯಲ್ಲಿ ಎಸ್.ಎಸ್. ಆಸ್ಪತ್ರೆಯ ಮುಖ್ಯಸ್ಥ ಎಸ್.ಎಸ್. ಮಲ್ಲಿಕಾರ್ಜುನ್ ಖಚಿತ ಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೀನ್ ಮೃತದೇಹವನ್ನು ಎಸ್.ಎಸ್. ಆಸ್ಪತ್ರೆಗೆ ದಾನವಾಗಿ ನೀಡುತ್ತೇವೆ ಎಂದು ಪೋಷಕರು ತಿಳಿಸಿದ್ದಾರೆ. ಪೋಷಕರು ನವೀನ್ ಮೃತದೇಹ ಮೆಡಿಕಲ್ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ದಾನವಾಗಿ ನೀಡುತ್ತಿದ್ದಾರೆ.

ಪೋಷಕರು ಅವರ ಮಗ ಡಾಕ್ಟರ್ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಎರಡು ದೇಶಗಳ ನಡುವಿನ ಯುದ್ಧದ ದಾಳಿಯಿಂದ ಸಾವನ್ನಪ್ಪಿದ್ದು ಆತನ ಮೃತದೇಹವಾದರೂ ಮೆಡಿಕಲ್‌ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಆಸೆ ಪಡುತ್ತಿದ್ದಾರೆ. ನಮ್ಮ ಆಸ್ಪತ್ರೆಗೆ ಯಾರೇ ಮೃತದೇಹ ದಾನ ಮಾಡಿದರೂ ಅಂತಹ ಕುಟಂಬಕ್ಕೆ ಆಸ್ಪತ್ರೆಯ ಚಿಕಿತ್ಸೆಯಲ್ಲಿ ರಿಯಾಯಿತಿ ಇದೆ.‌ ಮಗನ ಮೃತದೇಹವನ್ನು ದಾನವಾಗಿ ನೀಡಿದ ತಾಯಿ-ತಂದೆ ಉತ್ತಮ ಕಾರ್ಯಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ್ ಶ್ಲಾಘಿಸಿದರು.

ಇದನ್ನೂ ಓದಿ: ಗತವೈಭವ ಮರುಕಳಿಸಿ, ಪಂಡಿತರು ಮತ್ತೆ ಸ್ವಸ್ಥಾನಕ್ಕೆ ತೆರಳುವಂತಾಗಲಿ: ಪೇಜಾವರ ಶ್ರೀ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.