ದಾವಣಗೆರೆ : ರಾಜ್ಯ ಅನ್ಲಾಕ್ ಆಗಿದ್ದರೂ ಸಹ ಕೋವಿಡ್ ನಿಯಮಗಳು ಇನ್ನೂ ಚಾಲ್ತಿಯಲ್ಲಿವೆ. ಆದ್ರೆ, ಸಂಸದ ಜಿ ಎಂ ಸಿದ್ದೇಶ್ವರ್ ಅವರು ಸಾರ್ವಜನಿಕ ವಲಯದಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಸೈನಿಕರ ಹುತಾತ್ಮರ ಸ್ಮಾರಕ ಪಾರ್ಕ್ ಉದ್ಘಾಟನೆ ಮಾಡಿದ ಸಂಸದ ಸಿದ್ದೇಶ್ವರ ಅವರು, ನಂತರ ಜರುಗಿದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡರು.
ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಪಾಲನೆ ಮಾಡಬೇಕಾದವರಿಂದಲೇ ನಿಯಮ ಉಲ್ಲಂಘನೆ ಮಾಡಲಾಗಿದೆ. ಶಾಸಕರುಗಳಾದ ಎಸ್ ಎ ರವೀಂದ್ರನಾಥ್, ಎಸ್ ವಿ ರಾಮಚಂದ್ರಪ್ಪನವರೊಂದಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಥಳದಲ್ಲಿದ್ದರೂ ಕೂಡ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳದೆ ಜಾಣ ಕುರುಡುತನ ಪ್ರದರ್ಶಿಸಿದರು.
ಇನ್ನು, ಸೈನಿಕ ಹುತಾತ್ಮರ ಸ್ಮಾರಕ ಪಾರ್ಕ್ ಕಾಮಗಾರಿ ಹಂತದಲ್ಲಿದ್ದರೂ ಸಂಸದರ ಹುಟ್ಟು ಹಬ್ಬದ ಪ್ರಯುಕ್ತ ಉದ್ಘಾಟನೆ ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.