ದಾವಣಗೆರೆ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ನವೀನ್ ಮೃತಪಟ್ಟಿದ್ದಾನೆ. ಆದ್ರೆ ಆತನ ಮೃತದೇಹವೇ ಇನ್ನೂ ಬಂದಿಲ್ಲ. ಅಲ್ಲಿ ಹೋಗಿ ಪಾರ್ಥಿವ ಶರೀರ ತೆಗೆದುಕೊಂಡು ಬರುವವರು ಯಾರು? ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಪ್ರಶ್ನಿಸಿದ್ದಾರೆ.
ಮೃತ ನವೀನ್ ಸ್ನೇಹಿತನಾದ ಸಂಜಯ್ 'ನನ್ನ ಸ್ನೇಹಿತನ ಮೃತದೇಹವನ್ನು ಬೇಗ ತರಿಸಿ' ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದರು ಮೃತದೇಹವನ್ನು ಅಲ್ಲಿಂದ ತೆಗೆದುಕೊಂಡು ಬರುವವರು ಯಾರು ಎಂದು ಸಂಜಯ್ಗೆ ಮರು ಪ್ರಶ್ನಿಸಿದ್ದಾರೆ.
ದಾವಣಗೆರೆಯ ಡಿಸಿಎಂ ಲೇಔಟ್ನಲ್ಲಿರುವ ಸಂಜಯ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಸಂಸದ ಸಿದ್ದೇಶ್ವರ್ ಅಲ್ಲಿನ ಮಾಹಿತಿ ಪಡೆದರು. ನಾನು ಖಾರ್ಕೀವ್ ನಲ್ಲಿದ್ದಾಗ ಪರಿಸ್ಥಿತಿ ಬಹಳ ಕಷ್ಟಕರವಾಗಿತ್ತು ಎಂದು ಸಂಜಯ್ ಹೇಳಿದಾಗ ಕೀವ್, ಖಾರ್ಕೀವ್ ನಗರಗಳನ್ನು ನಾನು ನೋಡಿಲ್ಲ. ಕೇವಲ ಟಿವಿಯಲ್ಲಷ್ಟೇ ನೋಡಿದ್ದೇನೆ ಎಂದರು.
ಇದನ್ನೂ ಓದಿ: ಸಾಮಾಜಿಕ ಕಾರ್ಯಕರ್ತ ಜಯಂತ್ ತಿನೇಕರ್ ಮೇಲೆ ಮಾರಣಾಂತಿಕ ಹಲ್ಲೆ..!
ಎಂಬೆಸ್ಸಿಯವರು ಸಹಾಯ ಮಾಡಲಿಲ್ಲ: ಖಾರ್ಕೀವ್ ನಗರದಲ್ಲಿ ನಮ್ಮವರು ನಿಮಗೆ ಸಹಾಯ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿ ಸಂಜಯ್, ಭಾರತ ಸರ್ಕಾರ ರಾಯಭಾರ ಕಚೇರಿ ನಮಗೆ ಸಹಾಯ ಮಾಡಲಿಲ್ಲ ಎಂದು ಅಳಲು ತೋಡಿಕೊಂಡರು. ಕೀವ್ನಲ್ಲಿ ನಮ್ಮ ಎಂಬಿಸ್ಸಿಯವರು ಇದ್ದರು. ಅಲ್ಲಿಂದ ಖಾರ್ಕೀವ್ಗೆ ಅವರು ಬರಲಾಗಲಿಲ್ಲ. ನಾವು ಬಹಳ ಕಷ್ಟ ಪಟ್ಟೆವು. ಪೋಲ್ಯಾಂಡ್ ಬಾರ್ಡರ್ಗೆ ಬಂದ ಮೇಲೆ ಕೇಂದ್ರ ಸರ್ಕಾರದವರು ಚೆನ್ನಾಗಿ ನೋಡಿಕೊಂಡರು ಎಂದು ಸಂಜಯ್ ವಿವರಿಸಿದರು.