ದಾವಣಗೆರೆ: ಗ್ರಾಮಾಂತರ ಪ್ರದೇಶದ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡಾಗ ಮಾತ್ರ ಸರ್ಕಾರದ ಅನುದಾನ ಸದ್ಬಳಕೆಯಾಗುತ್ತದೆ. ಹೀಗಾಗಿ ಗುತ್ತಿಗೆದಾರರು ಗುಣಮಟ್ಟವನ್ನು ಕಾಪಾಡಿ ಎಂದು ಶಾಸಕ ಎಸ್. ರಾಮಪ್ಪ ಗುತ್ತಿಗೆದಾರರಿಗೆ ಆದೇಶಿಸಿದರು.
ದಾವಣಗೆರೆ ತಾಲೂಕಿನ ಹನಗವಾಡಿ ಗ್ರಾಮದಲ್ಲಿನ ಸೂಳೆಕೆರೆ ಹಳ್ಳದ ರಸ್ತೆ ಮತ್ತು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಗ್ರಾಮವು ತಾಲೂಕಿಗೆ ಹತ್ತಿರ ಇರುವ ಮತ್ತು ಗ್ರಾಮದಲ್ಲಿ ರಾಜಕೀಯ ವ್ಯಕ್ತಿಗಳು ಇರುವ ಕಾರಣ ಅಭಿವೃದ್ಧಿಯನ್ನು ಹೊಂದುವುದರ ಜೊತೆಗೆ, ಸತತ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಪಡೆದಿದೆ ಎಂದು ಪ್ರಶಂಸಿಸಿದರು.
ತಾಲೂಕಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಾನು ಶ್ರಮ ವಹಿಸುತ್ತೇನೆ. ಹನಗವಾಡಿಯ ಈ ಕಾಮಗಾರಿಗೆ ಜಿಪಂಯಿಂದ 6.5 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯಿಂದ 10 ಲಕ್ಷ ಅನುದಾನ ಮಂಜೂರಾಗಿದ್ದು, ರಸ್ತೆ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.