ETV Bharat / city

70ಕ್ಕೂ ಅಧಿಕ ಅಡಿಕೆ ಮರಗಳಿಗೆ ಕೊಡಲಿ ಪೆಟ್ಟು: ದುಷ್ಕರ್ಮಿಗಳ ಕೃತ್ಯದಿಂದ ಕಣ್ಣೀರಿಟ್ಟ ರೈತ

ದಾವಣಗೆರೆ ಜಿಲ್ಲೆಯ ‌ಜಗಳೂರು ತಾಲೂಕಿನ ಆಸಗೋಡು ಗ್ರಾಮದಲ್ಲಿ ಫಸಲಿಗೆ ಬಂದಿದ್ದ 70 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ಪರಾರಿಯಾಗಿದ್ದಾರೆ. ನೆಲಸಮವಾಗಿರುವ ಮರಗಳನ್ನು ಕಂಡು ರೈತ ಕಣ್ಣೀರಿಟ್ಟಿದ್ದಾನೆ.

miscreants cut more than 70 areca nut trees
ಅಡಿಕೆ ಮರಗಳಿಗೆ ಕೊಡಲಿ ಪೆಟ್ಟು
author img

By

Published : Sep 25, 2021, 7:19 AM IST

ದಾವಣಗೆರೆ: ಬೆಳೆದು ನಿಂತಿದ್ದ 70 ಕ್ಕೂ ಅಧಿಕ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಪರಾರಿಯಾಗಿರುವ ಘಟನೆ ಜಿಲ್ಲೆಯ ‌ಜಗಳೂರು ತಾಲೂಕಿನ ಆಸಗೋಡು ಗ್ರಾಮದಲ್ಲಿ ನಡೆದಿದೆ.

ಜಗಳೂರು ಬಡಪೀಡಿತ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ನೀರಿಲ್ಲದೆ ಆ ಭಾಗದ ರೈತರು ಸದಾ ಆತಂಕದಲ್ಲೇ ಕಾಲ ಕಳೆಯುತ್ತಾರೆ. ಅಸಗೋಡು ಗ್ರಾಮದ ರೈತ ಸಿದ್ದೇಶ್ ಕಳೆದ ಏಳು ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ಹಾಕಿದ್ದರು. ಮಳೆ ಇಲ್ಲದ ವೇಳೆ ಟ್ಯಾಂಕರ್​ಗಳಲ್ಲಿ ನೀರು ಹಾಕಿ ಗಿಡಗಳನ್ನು ಉಳಿಸಿಕೊಂಡಿದ್ದರು. ಉತ್ತಮ ಲಾಭ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಇದೀಗ ಕೊಡಲಿಪೆಟ್ಟು ಬಿದ್ದಂತಾಗಿದೆ.

ರಾತ್ರೋರಾತ್ರಿ ಡಿಕೆ ಮರಗಳನ್ನು ಕಡಿದು ಪರಾರಿಯಾದ ದುಷ್ಕರ್ಮಿಗಳು.. ರೈತ ಕಂಗಾಲು

ಮೊನ್ನೆ ರಾತ್ರಿ 70 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿ ಕ್ರೌರ್ಯ ಮೆರೆದಿದ್ದಾರೆ. ಏಳೆಂಟು ವರ್ಷಗಳಿಂದ ಹೆತ್ತ ಮಕ್ಕಳ ರೀತಿ ಸಾಕಿದ್ದ ಅಡಿಕೆ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದಿರುವುದನ್ನು ಕಂಡ ರೈತ ಸಿದ್ದೇಶ್​ಗೆ ದಿಕ್ಕು ತೋಚದಂತಾಗಿದ್ದು, ನ್ಯಾಯ ಕೊಡಿಸುವಂತೆ ಕಣ್ಣೀರಿಟ್ಟಿದ್ದಾರೆ.

ಈ ಕುರಿತು ಮರುಗಿ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೂಡಲೇ ತಪ್ಪಿತಸ್ಥರನ್ನು ಪತ್ತೆಹಚ್ಚಿ ಶಿಕ್ಷೆ ಕೊಡಿಸಬೇಕೆಂದು ರೈತ ಕುಟುಂಬ ಮನವಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.