ETV Bharat / city

ದೇಶಕ್ಕೆ RSS ಕೊಡುಗೆ ಅಪಾರ, ಕಾಂಗ್ರೆಸ್ ನಾಯಕರು ಹುಚ್ಚುಚ್ಚಾಗಿ ಏನೇನೋ ಮಾತನಾಡುತ್ತಿದ್ದಾರೆ.. ಸಚಿವ ಭೈರತಿ - ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಭೈರತಿ ಬಸವರಾಜ್ ವಾಗ್ದಾಳಿ

ದೇಶ ಉಳಿದಿದೆ ಎಂದರೆ ಅದು ಆರ್​​ಎಸ್ಎಸ್‌ನಿಂದ ಮಾತ್ರ. ಆ ಸಂಘಟನೆ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನಿಂದ ಹಿಡಿದು ಪ್ರತಿಯೊಬ್ಬರು ಎಚ್ಚರಿಕೆಯಿಂದ ಮಾತನಾಡಬೇಕು. ಏಕೆಂದರೆ, ಈ ದೇಶಕ್ಕೆ ಆರ್​​ಎಸ್ಎಸ್ ಕೊಡುಗೆ ಅಪಾರ. ನಾವು ಹಾಗೂ ಈ ದೇಶ ಸುಭದ್ರವಾಗಿದೆ ಎಂದರೆ ಅದಕ್ಕೆ ಕಾರಣ ಆರ್​​ಎಸ್​​ಎಸ್..

Minister Byrathi Basavaraj
ಸಚಿವ ಭೈರತಿ ಬಸವರಾಜ್
author img

By

Published : May 31, 2022, 1:02 PM IST

ದಾವಣಗೆರೆ : ಕಾಂಗ್ರೆಸ್ ನಾಯಕರು ಹುಚ್ಚುಚ್ಚಾಗಿ ಏನೇನೋ ಮಾತನಾಡುತ್ತಿದ್ದಾರೆ. ಸ್ವಯಂಸೇವ ಸಂಘ ಇಲ್ಲದೆ ಹೋಗಿದ್ದರೆ, ಈ ದೇಶವನ್ನು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಆರ್‌ಎಸ್ಎಸ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಎಲ್ಲೋ ಸೋಲಿನ ಭೀತಿ ಕಾಡುತ್ತಿದೆ. ಹಾಗಾಗಿ, ಏನೇನೋ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಭೈರತಿ ಬಸವರಾಜ್..

ದೇಶ ಉಳಿದಿದೆ ಎಂದರೆ ಅದು ಆರ್​​ಎಸ್ಎಸ್‌ನಿಂದ ಮಾತ್ರ. ಆ ಸಂಘಟನೆ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನಿಂದ ಹಿಡಿದು ಪ್ರತಿಯೊಬ್ಬರು ಎಚ್ಚರಿಕೆಯಿಂದ ಮಾತನಾಡಬೇಕು. ಏಕೆಂದರೆ, ಈ ದೇಶಕ್ಕೆ ಆರ್​​ಎಸ್ಎಸ್ ಕೊಡುಗೆ ಅಪಾರ. ನಾವು ಹಾಗೂ ಈ ದೇಶ ಸುಭದ್ರವಾಗಿದೆ ಎಂದರೆ ಅದಕ್ಕೆ ಕಾರಣ ಆರ್​​ಎಸ್​​ಎಸ್.

ಇದನ್ನು ಅರಿತುಕೊಂಡು ಅವರು ಮಾತನಾಡಬೇಕಿದೆ. ಪ್ರತಿಯೊಬ್ಬ ಆರ್‌ಎಸ್​​ಎಸ್ ಕಾರ್ಯಕರ್ತ ದೇಶದ ಬಗ್ಗೆ ಚಿಂತನೆ ನಡೆಸುತ್ತಿದ್ದಾನೆ. ಇತಂಹವರ ಬಗ್ಗೆ ಮಾತ್ನಾಡುವುದು ಶೋಭೆ ತರುವಂತಹದಲ್ಲ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಬ್ರಿ ಮಸೀದಿ ಕೆಡವಿ ಅಲ್ಲಿ ಏನ್ಮಾಡ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಬಾಬ್ರಿ ಮಸೀದಿ ಕೆಡವಿದ ಸ್ಥಳದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇಡೀ ಪ್ರಪಂಚ ನೋಡಲಿರುವ ಈ ಭವ್ಯ ಮಂದಿರವನ್ನು ಕಟ್ಟುವುದನ್ನು ಇವರು ಕೂಡ ಹೋಗಿ ನೋಡಲಿ ಎಂದರು.

ಬೆಳೆ ಹಾನಿ ಪ್ರದೇಶಕ್ಕೆ ಭೇಟಿ : ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಮಗ್ರ ವರದಿ ತರಿಸಿಕೊಂಡಿದ್ದೇನೆ. ಇದರ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೇವೆ. ಅದಷ್ಡು ಬೇಗ ಪರಿಹಾರ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.

ಪಕ್ಷದ ನಿರ್ಧಾರಕ್ಕೆ ಬದ್ಧ : ನಟ ಜಗ್ಗೇಶ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿರುವುದು ಪಕ್ಷದ ನಿರ್ಧಾರ. ಪಕ್ಷದ ನಿರ್ಧಾರಕ್ಕೆ ನಾವು ಬದ್ಧ. ನಿಷ್ಠಾವಂತ ಕಾರ್ಯಕರ್ತನಿಗೆ ಈ ಟಿಕೆಟ್ ನೀಡಿರುವುದು ಸ್ವಾಗರ್ತಹ. ಇದಲ್ಲದೇ, ಡಿಸೆಂಬರ್​​ನಲ್ಲಿ ಚುನಾವಣೆ ಬಂದರೆ ಅದನ್ನು ಎದುರಿಸಲು ಸನ್ನದ್ಧವಾಗಿದ್ದೇವೆ. ಚುನಾವಣೆಗೆ ಹಿಂಜರಿಯುದಿಲ್ಲ, ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ ಎಂದರು.

ಇದನ್ನೂ ಓದಿ: ನನ್ನ ಪ್ರಶ್ನೆಗೆ ಉತ್ತರಿಸಲಾಗದ ಆರ್​ಎಸ್​ಎಸ್​ ಬಿಜೆಪಿಗರನ್ನು ಛೂ ಬಿಟ್ಟಿದೆ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.