ETV Bharat / city

ಶಿಷ್ಯ ವೇತನಕ್ಕೆ ಆಗ್ರಹಿಸಿ ದಾವಣಗೆರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

author img

By

Published : Oct 3, 2021, 4:41 AM IST

Updated : Oct 3, 2021, 12:31 PM IST

ಶಿಷ್ಯ ವೇತನಕ್ಕೆ ಆಗ್ರಹಿಸಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ನಿನ್ನೆ ಹೋರಾಟ ಮಾಡಿರುವ ಪ್ರತಿಷ್ಠಿತ ಬಾಪೂಜಿ ಸಂಸ್ಥೆಗೆ ಸೇರಿದ ಜೆಜೆಎಂ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಶಿಷ್ಯ ವೇತನ ನೀಡುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.

Medical students protest in davangere for all their demands
ಶಿಷ್ಯ ವೇತನಕ್ಕೆ ಆಗ್ರಹಿಸಿ ದಾವಣಗೆರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆ: ಕೋವಿಡ್‌ ಸಮಯದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡದ ಆರೋಪ ಕೇಳಿ ಬಂದಿದೆ. ತಮಗೆ ಶಿಷ್ಯ ವೇತನ ನೀಡಬೇಕೆಂದು ಪ್ರತಿಷ್ಠಿತ ಬಾಪೂಜಿ ಸಂಸ್ಥೆಗೆ ಸೇರಿದ ಜೆಜೆಎಂ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ದಾವಣಗೆರೆಯಲ್ಲಿ ನಿನ್ನೆ ಪ್ರತಿಭಟನೆ ನಡೆಸಿದ್ದಾರೆ.

ಇಲ್ಲಿನ ವೈದ್ಯರಿಗೆ ಸರ್ಕಾರ ನೀಡಬೇಕಾದ ಶಿಷ್ಯ ವೇತನ ಬಿಡುಗಡೆ ಯಾಗಿಲ್ಲ. ಒಂದು ಕಡೆ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಬೇಕು ಅಂತಾರೆ. ಮತ್ತೊಂದು ಕಡೆ ಕಾಲೇಜು ಆಡಳಿತ ಮಂಡಳಿ ನೀಡಬೇಕು ಎಂಬ ಮಾತು ಕೇಳಿ ಬರುತ್ತಿದೆ. ಇಬ್ಬರು ಸೇರಿ ಒಂದು ನಿರ್ಧಾರಕ್ಕೆ ಬಂದು ನಮಗೆ ಶಿಷ್ಯ ವೇತನ ನೀಡಿ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇಲ್ಲಿ ಸೇರಿದ್ದವರ ಪೈಕಿ ಕೆಲವರು ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿದ್ದಾರೆ. ಜೊತೆಗೆ ಅವರು ಮೆರಿಟ್ ಆಧಾರದ ಮೇಲೆ ಸಿಇಟಿಯಿಂದ ಮೆಡಿಕಲ್ ಸೀಟ್ ಪಡೆದು ಓದಿದವರು. ಎಂಬಿಬಿಎಸ್ ಮುಗಿದ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಇವರಿಗೆ ಸರ್ಕಾರದಿಂದ ಶಿಷ್ಯ ವೇತನ ನೀಡಲಾಗುತ್ತದೆ. ಆದ್ರೆ ಕಳೆದ ಐದು ವರ್ಷಗಳಿಂದ ಶಿಷ್ಯ ವೇತನ ನೀಡಿಲ್ಲ. ಕಾರಣ ಕೇಳಿದ್ರೆ ಉತ್ತರ ಸಹ ಸಿಗುತ್ತಿಲ್ಲ. ಹೀಗಾಗಿ ಮೆಣದಬತ್ತಿ ಹಿಡಿದು ಶಾಂತಿಯು ಹೋರಾಟಕ್ಕೆ ವೈದ್ಯರು ಮುಂದಾಗಿದ್ದಾರೆ. ಇದೇ ಹೋರಾಟ ತೀವ್ರ ಗೊಳಿಸಿ ದಾವಣಗೆರೆ ನಗರದ ಜಯದೇವ ಸರ್ಕಲ್ ನಲ್ಲಿ ಶಾಶ್ವತ ಹೋರಾಟಕ್ಕೆ ವೈದ್ಯರು ನಿರ್ಧರಿಸಿದ್ದು, ವಿಶೇಷವಾಗಿದೆ ಹಾಗೂ ಜಿಲ್ಲಾಡಳಿತಕ್ಕೆ ಆತಂಕಕ್ಕೆ ಕಾರಣವಾಗಿದೆ.

ಶಿಷ್ಯ ವೇತನ ಯಾವಾಗ ಕೊಡ್ತೀರಾ?

ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಜೆಜೆಎಂ ಮೆಡಿಕಲ್ ಕಾಲೇಜ್‌ನ 104 ವೈದ್ಯರು ಕೆಲಸ ಮಾಡುತ್ತಾರೆ. ನಮ್ಮ ಸಂಸ್ಥೆಯ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ಅವರಿಗೆ ಶಿಷ್ಯ ವೇತನ ಸರ್ಕಾರವೇ ಕೊಡಬೇಕು ಎಂದು ಸಂಸ್ಥೆ ಹೇಳಿತ್ತು. ಈ ಪ್ರಕಾರ ಇಷ್ಟು ವರ್ಷ ಸರ್ಕಾರವೇ ಇವರಿಗೆ ಶಿಷ್ಯ ವೇತನ ನೀಡಿತ್ತು. ಕಳೆದ ವರ್ಷ ವೈದ್ಯಕೀಯ ಶಿಕ್ಷಣ ಇಲಾಖೆ ಆಡಿಟ್‌ನಲ್ಲಿ ತೊಂದರೆ ಆಗುತ್ತದೆ ಎಂದು ಹೇಳಿ, ಖಾಸಗಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯೇ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಬೇಕು ಎಂದು ಸರ್ಕಾರ ಹೇಳಿತ್ತು. ನಂತರ ಕಳೆದ ವರ್ಷದ ಶಿಷ್ಯ ವೇತನ ಮಾತ್ರ ನೀಡಿ ಸರ್ಕಾರ ಸುಮ್ಮನಾಗಿತ್ತು. ಆದ್ರೆ ಈ ವರ್ಷದ ಶಿಷ್ಯ ವೇತನ ನೀಡಿಲ್ಲ.

ವಿಶೇಷವಾಗಿ ಕಾಲೇಜು ಆಡಳಿತ ಮಂಡಳಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ತಿಕ್ಕಾಟದ ನಡುವೆ ವೈದ್ಯರು ಕಷ್ಟ ಅನುಭವಿಸುತ್ತಿದ್ದಾರೆ. ಮೇಲಾಗಿ ಬಹುತೇಕರು ಮಧ್ಯಮ ವರ್ಗದ ಕುಟುಂಬದಿಂದ ಬಂದು ಕೊರೊನಾ ವೇಳೆಯಲ್ಲಿ ಕೆಲಸ ಮಾಡಿದವರಿದ್ದಾರೆ. ಇದರ ಬಗ್ಗೆ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Last Updated : Oct 3, 2021, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.