ETV Bharat / city

ಲಾಕ್ ಡೌನ್ ಸಂಕಷ್ಟ: ಆ್ಯಂಬುಲೆನ್ಸ್​​ಗೆ ದಾರಿ ಬಿಡದೆ ಕ್ರೌರ್ಯ ಮೆರೆದ ಜನ

author img

By

Published : Apr 16, 2020, 2:00 PM IST

ದಾವಣಗೆರೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಆ್ಯಂಬುಲೆನ್ಸ್​​ಗೂ ದಾರಿ ಬಿಡದೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿತು.

ದಾವಣಗೆರೆಯಲ್ಲಿ ಲಾಕ್​ ಡೌನ್​ ಉಲ್ಲಂಘಿಸಿದ ಸವಾರರು

ದಾವಣಗೆರೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ‌ ಮಹಾಂತೇಶ್ ಆರ್. ಬೀಳಗಿ ಎಚ್ಚರಿಕೆ ನೀಡಿದ್ದರೂ ಜನರು ಮಾತ್ರ ಕ್ಯಾರೆ ಎನ್ನುತ್ತಿಲ್ಲ.

ನಗರದ ಗಾಂಧಿ ವೃತ್ತದ ಬಳಿ ಇರುವ ರೈಲ್ವೆ ಬ್ರಿಡ್ಜ್ ಬಳಿ ವಾಹನ ಸಂಚಾರ ಜೋರಾಗಿದೆ. ಆ್ಯಂಬುಲೆನ್ಸ್​​ಗೂ ದಾರಿ ಬಿಡದೆ ವಾಹನಗಳು ಸಾಲುಗಟ್ಟಿ ನಿಂತಿವೆ. ದಾವಣಗೆರೆಯಲ್ಲಿ ಲಾಕ್ ಡೌನ್ ಇದೆಯೋ ಇಲ್ವೋ ಎನ್ನುವ ಸಂಶಯ ಕಾಡುವಂತೆ‌ ಜನರು ಸಂಚಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಮೇ 3 ರವರೆಗೆ ಲಾಕ್ ಡೌನ್ ವಿಸ್ತರಣೆ ಮುಂದುವರಿಕೆ ಮಾಡಿದ್ದರೂ ಜನರು ಮಾತ್ರ ಸ್ಪಂದಿಸುತ್ತಿಲ್ಲ. ಲಾಕ್ ಡೌನ್ ಮಧ್ಯೆಯೂ ರಸ್ತೆಯಲ್ಲಿ ಬಹಳ ವಾಹನಗಳು ಸಂಚರಿಸುತ್ತಿವೆ. ಇದರಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.

ಇನ್ನು ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ವರೆಗೆ ಜಿಲ್ಲೆಯಲ್ಲಿ‌ ಮೂರು ಕೊರೊನಾ ಪ್ರಕರಣಗಳು ನೆಗೆಟಿವ್ ಬಂದ ಬಳಿಕವೂ ಜನರು ಹಾಗೂ ವಾಹನಗಳ ಓಡಾಟ ಹೆಚ್ಚಾಗಿರುವುದು ದುರಂತವೇ ಸರಿ. ಈಗಲಾದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.