ETV Bharat / city

ಕೆಪಿಎಸ್​ಸಿ ಪರೀಕ್ಷಾ ಅಕ್ರಮ ಪ್ರಕರಣ: ಮತ್ತೆ ಮೂವರ ಬಂಧನ - ದೈಹಿಕ ಶಿಕ್ಷಕರ ನೇಮಕಾತಿ ಕುರಿತು ಮಾಹಿತಿ

ಕೆಪಿಎಸ್​ಸಿ ಪ್ರವೇಶ ಪರೀಕ್ಷೆಯಲ್ಲಿ ನಡೆದ ಅಕ್ರಮದ ಕುರಿತು ತನಿಖೆ ಮುಂದುವರೆಯುತ್ತಿದ್ದು, ಈ ಹಿಂದೆ 11 ಜನ ಮತ್ತು ಈಗ ಮೂವರು ಸೇರಿ ಈ ಪ್ರಕರಣದಲ್ಲಿ ಒಟ್ಟು 14 ಆರೋಪಿಗಳ ಬಂಧನವಾದಂತಾಗಿದೆ. ಈ ಅಕ್ರಮದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಇದ್ದು, ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕೆಪಿಎಸ್​ಸಿ ಪರೀಕ್ಷಾ ಅಕ್ರಮ ಪ್ರಕರಣ
author img

By

Published : Jul 29, 2019, 6:13 PM IST

ದಾವಣಗೆರೆ: ಕೆಪಿಎಸ್​ಸಿ ಪ್ರವೇಶ ಪರೀಕ್ಷೆಯಲ್ಲಿ ನಡೆದ ಅಕ್ರಮದ ಕುರಿತು ತನಿಖೆ ಮುಂದುವರೆಯುತ್ತಿದ್ದು, ಈ ಹಿಂದೆ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್ ಅಧಿಕಾರಿಯೊಬ್ಬರನ್ನು ಬಂಧಿಸಿದ್ದ ದಾವಣಗೆರೆ ಪೊಲೀಸರು, ಇದೀಗ ಮತ್ತೆ ಮೂವರನ್ನ ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರು ಜಲ ಮಂಡಳಿಯ ಸಹಾಯಕ-ಸಾಗರ್ ಕರ್ಕಿ, ಕಲಬುರಗಿ ರೇಷ್ಮೆ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಶೈಲ್ ಹಳ್ಳಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಹಾವೇರಿ ಮೂಲದ ಮಾರುತಿ ಬಂಧಿತ ಆರೋಪಿಗಳು. ಈ ಹಿಂದೆ 11 ಜನ ಮತ್ತು ಈಗ ಮೂವರು ಸೇರಿ ಈ ಪ್ರಕರಣದಲ್ಲಿ ಒಟ್ಟು 14 ಆರೋಪಿಗಳ ಬಂಧನವಾದಂತಾಗಿದೆ. ಈ ಅಕ್ರಮದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಇದ್ದು, ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ದಾವಣಗೆರೆ ಅಪರಾಧ ವಿಭಾಗದ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರಕರಣದ ಹಿನ್ನೆಲೆ:

2017ರ ಅಕ್ಟೋಬರ್​ನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಕೆಪಿಎಸ್​ಸಿ ಪರೀಕ್ಷೆ ನಡೆಸಿತ್ತು. ಆಗ ದಾವಣಗೆರೆಯ ನೂತನ ಕಾಲೇಜಿನಲ್ಲಿ ನಡೆದ ಪರೀಕ್ಷೆ ವೇಳೆ ಮೂವರು ಪರೀಕ್ಷಾರ್ಥಿಗಳು ಮೈಕ್ರೋ ಫೋನ್​ಗಳನ್ನು ಬಳಸಿ ಪರೀಕ್ಷೆ ಬರೆಯುತ್ತಿದ್ದರು ಎಂದು ತಿಳಿದು ಬಂದಿತ್ತು. ಈ ವೇಳೆ ಪರೀಕ್ಷಾ ಮೇಲ್ವಿಚಾರಕರ ಕೈಗೆ ರೆಡ್ ಹ್ಯಾಂಡ್​ ಆಗಿ ದಾವಣಗೆರೆ ತಾಲೂಕಿನ ಸುಭಾಷ್, ಶ್ರೀನಿವಾಸ್ ಹಾಗೂ ತಿಪ್ಪೇಶ್ ಎಂಬುವವರು ಸಿಕ್ಕಿಬಿದ್ದಿದ್ದರು.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕಿಂಗ್ ಪಿನ್ ಆಗಿದ್ದ ರಾಮಚಂದ್ರಯ್ಯನನ್ನು 2018ರ ಜೂನ್​ನಲ್ಲಿ ದಾವಣಗೆರೆ ಪೊಲೀಸರು ಬಂಧಿಸಿದ್ದರು. ರಾಮಚಂದ್ರಯ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿಯಾಗಿದ್ದು, ಈತನನ್ನು 420 ಕೇಸ್​ನಲ್ಲಿ ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸರು ಬಂಧಿಸಿದ್ದರು.

ಒಟ್ಟಿನಲ್ಲಿ 2017ರಲ್ಲಿ ಕೆಪಿಎಸ್​ಸಿ ಪರೀಕ್ಷಾ ವೇಳೆ ನಡೆದ ಅಕ್ರಮ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇನ್ನೂ ಹಲವು ಮಂದಿ ಈ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ, ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.

Intro:KN_DVG_29_KPSC CASE_SCRIPT_01_7203307

REPORTER : YOGARAJ G. H.

ಕೆಪಿಎಸ್ ಸಿ ಪರೀಕ್ಷಾ ಅಕ್ರಮ ಮೊಗೆದಷ್ಟು ಆಳಕ್ಕೆ - ಮತ್ತೆ ಮೂವರ ಬಂಧನ - ಇದುವರೆಗೆ 14 ಆರೋಪಿಗಳ ಅರೆಸ್ಟ್

ದಾವಣಗೆರೆ : ಕೆ ಪಿ ಎಸ್ ಸಿ ಪ್ರವೇಶ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಬಗೆದಷ್ಟು ಇನ್ನೂ ಆಳಕ್ಕೆ ಹೋಗುತ್ತಿದೆ. ಈ ಹಿಂದೆ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದ
ಕೆಎಎಸ್ ಅಧಿಕಾರಿಯೊಬ್ಬನನ್ನು ಬಂಧಿಸಿದ್ದ ದಾವಣಗೆರೆ ಪೊಲೀಸರು ಇದೀಗ ಮತ್ತೆ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಈ ಅಕ್ರಮದಲ್ಲಿ ಇನ್ನು ಹಲವರು ಭಾಗಿಯಾಗಿರುವ ಮಾಹಿತಿ ದೊರೆತಿದ್ದು,
ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕೆ ಪಿ ಎಸ್ ಸಿ ಪರೀಕ್ಷಾ ಅಕ್ರಮದಲ್ಲಿ ಇನ್ನು ಹಲವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಅಪರಾಧ ವಿಭಾಗದ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು,
ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳ ಹುಡುಕಾಟವನ್ನು ಚುರುಕುಗೊಳಿಸಿದ್ದಾರೆ. ಬೆಂಗಳೂರು ಜಲ ಮಂಡಳಿಯ ಸಹಾಯಕ ಸಾಗರ್ ಕರ್ಕಿ, ಕಲಬುರ್ಗಿ ರೇಷ್ಮೆ ಪದವಿ ಕಾಲೇಜಿನ
ಪ್ರಾಚಾರ್ಯ ಶ್ರೀಶೈಲ್ ಹಳ್ಳಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಹಾವೇರಿ ಮೂಲದ ಮಾರುತಿ ಇದೀಗ ಬಂಧಿತರಾಗಿರುವ ಆರೋಪಿಗಳು. ಈ ಹಿಂದೆ 11 ಜನ ಮತ್ತು ಇದೀಗ
ಮೂವರು ಸೇರಿ ಈ ಪ್ರಕರಣದಲ್ಲಿ ಒಟ್ಟು 14 ಆರೋಪಿಗಳ ಬಂಧನವಾದಂತಾಗಿದೆ.

ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವ ಆರೋಪಿಗಳ ಜಾಲ ರಾಜ್ಯಾದ್ಯಂತ ಹರಿಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಪ್ರಕರಣದ ಬೆನ್ನು ಬಿದ್ದಿರುವ ದಾವಣಗೆರೆ
ಅಪರಾಧ ವಿಭಾಗದ ಪೊಲೀಸರು ಇನ್ನು ತನಿಖೆಯನ್ನು ಮುಂದುವರಿಸಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆಯನ್ನು ಬೀಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು....?

2017 ರ ಅಕ್ಟೋಬರ್ ನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಕೆ ಪಿ ಎಸ್ ಸಿ ಪರೀಕ್ಷೆ ನಡೆಸಿತ್ತು. ಆಗ ದಾವಣಗೆರೆಯ ನೂತನ ಕಾಲೇಜಿನಲ್ಲಿ ನಡೆದ
ಪರೀಕ್ಷೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿತ್ತು. ಕಾರಣ, ಪರೀಕ್ಷೆ ಬರೆಯುತ್ತಿದ್ದ ಮೂವರು ಪರೀಕ್ಷಾರ್ಥಿಗಳು ಮೈಕ್ರೋಫೋನ್ ಗಳನ್ನು ಬಳಸಿ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಪರೀಕ್ಷಾ ಮೇಲ್ವಿಚಾರಕರ
ಕೈಗೆ ರೆಡ್ ಹ್ಯಾಂಡಾಗಿ ದಾವಣಗೆರೆ ತಾಲೂಕಿನವರಾದ ಸುಭಾಷ್, ಶ್ರೀನಿವಾಸ್ ಹಾಗೂ ತಿಪ್ಪೇಶ್ ಎಂಬುವರು ಸಿಕ್ಕಿ ಬಿದ್ದಿದ್ದರು.

ಇನ್ನು, ಕಳೆದ ಒಂಬತ್ತು ತಿಂಗಳ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕಿಂಗ್ ಪಿನ್ ಆಗಿದ್ದ ರಾಮಚಂದ್ರಯ್ಯನನ್ನು 2018 ರ ಜೂನ್ ನಲ್ಲಿ ದಾವಣಗೆರೆ ಪೊಲಿಸರು ಬಂಧಿಸಿದ್ದರು.
ರಾಮಚಂದ್ರಯ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿಯಾಗಿದ್ದು, ಈತನನ್ನು 420 ಕೇಸ್ ನಲ್ಲಿ ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸರು ಬಂಧಿಸಿದ್ದರು. ಈತ
ಪರೀಕ್ಷಾ ಅಕ್ರಮ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆಂಬ ಮಾಹಿತಿ ಹಿನ್ನಲೆಯಲ್ಲಿ ಈತನನ್ನು ಬಾಡಿ ವಾರೆಂಟ್ ಪಡೆದು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಒಟ್ಟಿನಲ್ಲಿ, 2017 ರಲ್ಲಿ ಕೆಪಿಎಸ್ಸಿ ಪರೀಕ್ಷಾ ವೇಳೆ ನಡೆದ ಅಕ್ರಮ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇನ್ನು ಹಲವು ಮಂದಿ ಕಿಂಗ್ ಪಿನ್ ಗಳು ಇರುವ ಸಾಧ್ಯತೆ ಇದೆ. ಹೀಗಾಗಿ, ಪ್ರಕರಣದ
ಬೆನ್ನು ಬಿದ್ದಿರುವ ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ಇನ್ನು ಯಾರೆಲ್ಲಾ ಬಂಧನವಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Body:KN_DVG_29_KPSC CASE_SCRIPT_01_7203307

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.