ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಗಗನಕ್ಕೇರಿದೆ. ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ದಾವಣಗೆರೆಯ ಜೈನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅನುಪಯುಕ್ತ ಪ್ಲಾಸ್ಟಿಕ್ ಮೂಲಕ ಪೆಟ್ರೋಲ್ ತೆಗೆಯುವ ಯಂತ್ರ ತಯಾರಿಸಿದ್ದಾರೆ.
ಡಾ. ರಮೇಶ್ ನೀಡಿರುವ ಸಲಹೆ ಪಡೆದ ಮೋಹನ್ ಕುಮಾರ್, ಮೋಹನ್ ನಾಯಕ್ ಮತ್ತು ನಯನ ಈ ಮಾದರಿಯನ್ನು ತಯಾರಿಸಿದ್ದಾರೆ. ಅನುಪಯುಕ್ತ ಪ್ಲಾಸ್ಟಿಕ್ ಅನ್ನು ಚಿಕ್ಕದಾಗಿ ತುಂಡು ಮಾಡಿ 400 ಡಿಗ್ರಿ ತಾಪಮಾನದಲ್ಲಿ ಕಾಯಿಸಲಾಗುತ್ತದೆ. ಅದರಿಂದ ಉತ್ಪತ್ತಿಯಾಗುವ ಕಂಡೆನ್ಸರ್ ಗ್ಯಾಸ್ ಹಾಗು ಹೈಡ್ರೋಕಾರ್ಬೋ ಮೂಲಕ ಪೆಟ್ರೋಲ್ ಪಡೆಬಹುದು. ಈ ಪೆಟ್ರೋಲ್ ಅನ್ನು 2 ಹಾಗು 4 ಸ್ಟ್ರೋಕ್ ಎಂಜಿನ್ಗಳಲ್ಲಿ ಬಳಸಬಹುದಾಗಿದೆ.
ಕಾಲೇಜು ಪ್ರಾಂಶುಪಾಲರಾದ ಡಾ.ಗಣೇಶ್ ಮಾತನಾಡಿ, "ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಪ್ರಾಜೆಕ್ಟ್ಗಳನ್ನು ತಯಾರಿಸಲು ರಾಜ್ಯ ಸರ್ಕಾರ, ವಿಟಿಯು, ಕೆಎಸ್ಇಟಿನವರು ಫಂಡ್ ನೀಡಿದ್ದರು. ವಿದ್ಯಾರ್ಥಿಗಳ 7 ಪ್ರಾಜೆಕ್ಟ್ ಎಫ್ಸಿಸಿಐಗೆ ಆಯ್ಕೆಯಾಗಿರುವುದು ಸಂತಸ ತಂದಿದೆ" ಎಂದು ತಿಳಿಸಿದರು.
ಪ್ರದರ್ಶನದಲ್ಲಿ ಕೃಷಿಗೆ ಸಂಬಂಧಿಸಿದಂತೆ ಪರಿಕರಗಳು, ಪ್ಲಾಸ್ಟಿಕ್ನಿಂದ ಪೆಟ್ರೋಲ್ ತಯಾರು ಮಾಡುವ ಯಂತ್ರ, ವೇಸ್ಟ್ನಿಂದ ಬಯೋ ಗ್ಯಾಸ್ ತಯಾರು ಮಾಡುವುದು, ಎಲೆಕ್ಟ್ರಿಕ್ ವೆಹಿಕಲ್, ವುಮೆನ್ ಸೇಫ್ಟಿ ಡಿವೈಸ್ ಹೀಗೆ ವಿವಿಧ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದರು.
ಇದನ್ನೂ ಓದಿ: 'ಇದು ಸ್ಕೂಟರ್ ಅಲ್ಲ ಕತ್ತೆ' ಓವರ್ಲೋಡ್ ವಸ್ತು ತುಂಬಿಕೊಂಡು ರೈಡ್: ವಿಡಿಯೋ ನೋಡಿ