ETV Bharat / city

ವಿಶ್ವ ವಿಖ್ಯಾತಿ ಈ ದೇವಸ್ಥಾನ: ಹರಿಹರೇಶ್ವರನ ಗಂಧ ಉಯೋಗಿಸಿದ್ರೆ ಸಂತಾನ ಭಾಗ್ಯ ಪ್ರಾಪ್ತಿ!? - history and fame of harihareshwar temple

ಹೊಯ್ಸಳರ‌ ಕಾಲದಲ್ಲಿ ನಿರ್ಮಾಣವಾದ ಹರಿಹರೇಶ್ವರ ದೇವಾಲಯ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಈ ಪುಣ್ಯ ಸ್ಥಳ, ಕಾಶಿಗಿಂತ ಪವಿತ್ರ ಎಂಬ ನಂಬಿಕೆ ಇದೆ. ಇಲ್ಲಿಗೆ ಭೇಟಿ ನೀಡುವ ಭಕ್ತರನ್ನು ಕೈ ಬಿಡದೆ ಹರಿಹರೇಶ್ವರ ಕಾಯುತ್ತಿದ್ದಾನೆ. ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾದ ಈ ಐತಿಹಾಸಿಕ ದೇವಾಲಯ ಇಂದಿಗೂ ಪ್ರಸಿದ್ಧಿ.

ಹರಿಹರೇಶ್ವರ ದೇವಾಲಯ
ಹರಿಹರೇಶ್ವರ ದೇವಾಲಯ
author img

By

Published : Feb 28, 2021, 8:26 AM IST

Updated : Jun 18, 2021, 7:31 PM IST

ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ಹರಿಹರೇಶ್ವರ ದೇವಾಲಯವು ಜಗತ್ತಿನಾದ್ಯಂತ ಖ್ಯಾತಿ ಪಡೆದುಕೊಂಡಿದೆ‌. ಈ ದೇವಾಲಯದಿಂದಲೇ ಹರಿಹರ ತಾಲೂಕಿಗೆ ಹರಿಹರ ಎಂಬ ಹೆಸರು ಬಂತು ಎಂಬುದು ಇತಿಹಾಸಕಾರರ ವಾದ. ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾದ ಈ ಐತಿಹಾಸಿಕ ದೇವಾಲಯ ಇಂದಿಗೂ ಹಿರಿಮೆಯನ್ನು ಹಾಗೆಯೇ ಉಳಿಸಿಕೊಂಡಿರುವುದು ವಿಶೇಷ.

ಹೊಯ್ಸಳರ‌ ಕಾಲದಲ್ಲಿ ನಿರ್ಮಾಣವಾದ ಹರಿಹರೇಶ್ವರ ದೇವಾಲಯ

ಹೌದು, ಇಷ್ಟೊಂದು ಸುಂದರವಾದ ಹರಿಹರೇಶ್ವರ ದೇವಸ್ಥಾನವನ್ನು 1224 ರಲ್ಲಿ ನಿರ್ಮಾಣ ಮಾಡಲಾಗಿದ್ದು, ಎಲ್ಲೂ ಕೂಡ ಹಾನಿಯಾಗದಂತೆ ಕಾಪಾಡಿಕೊಂಡು ಬರಲಾಗಿದೆ. ಈ ದೇವಾಲಯವನ್ನು ಹೊಯ್ಸಳ ಸಾಮ್ರಾಜ್ಯದ ಅಧಿಪತಿ 2 ನೇ ನರಸಿಂಹನ ದಂಡನಾಯಕ ಪೊಲ್ವಾಳನು ನಿರ್ಮಾಣ ಮಾಡಿದ್ದಾನೆ ಎಂದು ಇಲ್ಲಿರುವ ಶಾಸನಗಳು ಸಾರುತ್ತಿವೆ. ಕಲ್ಲಿನ ಕಂಬಗಳಿಂದ ನಿರ್ಮಾಣವಾಗಿರುವ ಈ ದೇವಾಲಯಕ್ಕೆ ರಾಜ್ಯ, ಹೊರ ರಾಜ್ಯದ ಭಕ್ತರು ಭೇಟಿ ನೀಡಿ ದರ್ಶನ ಪಡೆದು ಹರಕೆಗಳನ್ನು ಹೊತ್ತು ಪುನೀತರಾಗುತ್ತಾರೆ.

ದೇವಾಲಯದ ಇತಿಹಾಸ:

ಹರಿಹರದ ಹರಿಹರೇಶ್ವರ ಧಾರ್ಮಿಕ ಕ್ಷೇತ್ರ ಕೆಲ ವರ್ಷಗಳ ಹಿಂದೆ ಗುಹಾರಣ್ಯ ಕ್ಷೇತ್ರವಾಗಿತ್ತಂತೆ. ಈ ಹರಿಹರ ಕ್ಷೇತ್ರದಲ್ಲಿ ವಾಸವಿದ್ದ ಗುಹಾಸುರ ಎಂಬ ರಾಕ್ಷಸನ ವಧೆಗಾಗಿ ಹರಿ ಮತ್ತು ಹರ ಇಬ್ಬರು ಸೇರಿ ಅ ರಾಕ್ಷಸನನ್ನು ಸಂಹಾರ‌ ಮಾಡಿದರು‌ ಎಂದು ಇತಿಹಾಸ ತಿಳಿಸುತ್ತಿದೆ. ಹರಿ ಮತ್ತು ಹರ ಇಬ್ಬರು ರಾಕ್ಷಸನ ವಿರುದ್ಧ ಸೆಣಸಾಟ ನಡೆಸಿ, ಗುಹಾಸುರ ರಾಕ್ಷಸನನ್ನು ಮಣಿಸಿ ಇಲ್ಲೇ ನೆಲೆಸಿದ್ದರು. ಅವರು ನೆಲೆಸಿದ್ದ ಸ್ಥಳ ದೇವಸ್ಥಾನವಾಗಿ ಮಾರ್ಪಾಡಾಗಿದೆ ಎನ್ನಲಾಗ್ತಿದೆ.

ಇಲ್ಲಿನ ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧ ಭಾಗ ಮತ್ತು ವಿಷ್ಣುವಿನ ದೇಹದ ಅರ್ಧ ಭಾಗದಿಂದ ಕೂಡಿರುವುದು ವಿಶೇಷ. ಏಳು ಅಡಿ ಎತ್ತರದ ಹರಿಹರ ಮೂರ್ತಿಗಳು ಹರಿಹರದಲ್ಲಿ ಬಿಟ್ಟರೆ ಮತ್ತೆ ಎಲ್ಲಿಯೂ ಕೂಡ ನೋಡಲು ಸಿಗುವುದಿಲ್ಲ.

ಏನೆಲ್ಲಾ ಇದೆ ಹರಿಹರೇಶ್ವರ ದೇವಾಲಯದಲ್ಲಿ:

1224 ರಲ್ಲಿ 12ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಈ ದೇವಾಲಯದ ಕೆತ್ತನೆ‌ ಹಾಗು ವಾಸ್ತುಶಿಲ್ಪಗಳು ಸೊಗಸಾಗಿವೆ. ನೇರವಾಗಿ ಹಾಗೂ ತಲೆ ಕೆಳಗಾಗಿ ಕಾಣಸಿಗುವ ಕಂಬಗಳು, ಗರ್ಭಗುಡಿ, ನವರಂಗವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ವಿಶಾಲವಾದ ಮುಖ ಮಂಟಪದಲ್ಲಿ ಒಟ್ಟು 60 ಕಲಾಕೃತಿಯ ಕಂಬಗಳು ಭಕ್ತರನ್ನು,‌ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ದೇವಾಲಯದ ಎಡ ಹಾಗು ಬಲ ಭಾಗದಲ್ಲಿ ಎರಡು ಮುಖ್ಯ ದ್ವಾರಗಳಿದ್ದು, ವಿಶೇಷ ಶಿಲ್ಪ ಕಲೆಗಳನ್ನು ವೀಕ್ಷಿಸಲು ಎರಡು ಕಣ್ಣು ಸಾಲದು.

ಭಕ್ತರನ್ನು ಕಾಯುತ್ತಿರುವ ಹರಿಹರ:

ತುಂಗಭದ್ರಾ ನದಿ ದಡದಲ್ಲಿರುವ ಈ ಹರಿಹರೇಶ್ವರ ದೇವಾಲಯ ನಂಬಿ ಬಂದ ಭಕ್ತರನ್ನು ಕೈಬಿಡುವುದಿಲ್ಲವಂತೆ. ಹರಿಹರೇಶ್ವರನ ಹಣೆಯಲ್ಲಿರುವ ಗಂಧವನ್ನು ಉಪಯೋಗಿಸಿದ್ರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತೆ. ಪೀಡೆ, ಪಿಶಾಚಿ ಮತ್ತು ಕೆಲ ರೋಗಗಳನ್ನು ದೇವರು ವಾಸಿ ಮಾಡಿದ್ದಾನೆ ಎಂಬುದು ಭಕ್ತರ ನಂಬಿಕೆ. ಜೊತೆಗೆ ಮನೆ, ಸಂಸಾರದಂತಹ ಸಮಸ್ಯೆಗಳನ್ನು ಬಗೆಹರಿಸಿ ಭಕ್ತರನ್ನು ಕಾಯುತ್ತಿದ್ದಾನೆ ಅಂತಾರೆ ಇಲ್ಲಿನ ಅರ್ಚಕರು.

ಸುಂದರ ವಾಸ್ತುಶಿಲ್ಪ ಹೊಂದಿರುವ ದೇವಾಲಯವನ್ನು ವೀಕ್ಷಿಸಲು ರಾಜ್ಯಾದ್ಯಂತ ಹಾಗು ಕೇರಳ, ತಮಿಳುನಾಡು, ಆಂಧ್ರಪ್ರದೇಶದಿಂದ ಪ್ರವಾಸಿಗರು ಆಗಮಿಸುತ್ತಿರುವುದು ವಿಶೇಷ.

Last Updated : Jun 18, 2021, 7:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.