ದಾವಣಗೆರೆ: ತಾಲೂಕಿನ ಮಾಯಕೊಂಡ ಹೋಬಳಿಯ ಅಣಬೇರು ಗ್ರಾಮದಲ್ಲಿ ಹಿಂದೂಗಳ ಭೂಮಿಯಲ್ಲಿ ಈದ್ಗಾ ಗೋಡೆ ನಿರ್ಮಿಸಿ ಜಮೀನಿನ ಮಾಲೀಕ ಸಹಕರಿಸಿದ್ದಾರೆ. ಗ್ರಾಮದ ರಾಜಶೇಖರಪ್ಪ ಹಾಗು ರಾಜಪ್ಪ ಎಂಬುವವರ ಜಮೀನಿನ ನಡುವೆ ಈದ್ಗಾ ಮೈದಾನವಿದೆ. ಕಳೆದ ವರ್ಷ ಭಾರಿ ಮಳೆಯಾಗಿದ್ದು ಈದ್ಗಾ ಗೋಡೆ ಕುಸಿದಿದೆ. ಈ ಗೋಡೆಯನ್ನು ಮತ್ತೆ ಕಟ್ಟಲು ಜಮೀನಿನ ಮಾಲೀಕ ರಾಜಪ್ಪ, ರಾಜಶೇಖರಪ್ಪ ತಮ್ಮ ಭೂಮಿಯ ಸ್ವಲ್ಪಭಾಗವನ್ನು ಹೆಚ್ಚುವರಿಯಾಗಿ ನೀಡಿದ್ದಾರೆ.
ಇದನ್ನೂ ಓದಿ: ಮದುವೆಗೆ ಬರಲಾಗದ ಮುಸ್ಲಿಂ ಗೆಳೆಯರಿಗೆ ಮಸೀದಿಯಲ್ಲೇ ಇಫ್ತಾರ್ ನೀಡಿದ ಹಿಂದೂ ಯುವಕ
ಹಿಂದೂ ಕುಟುಂಬ ಭೂಮಿ ನೀಡಿದ ಬೆನ್ನಲ್ಲೇ ಈದ್ಗಾದ ಗೋಡೆ ಉದ್ಘಾಟನೆ ನಡೆಯಿತು. ಇದೇ ವೇಳೆ ರಾಜಪ್ಪ ಹಾಗು ರಾಜಶೇಖರಪ್ಪನವರನ್ನು ಮುಸ್ಲಿಂ ಸಮುದಾಯದ ಮುಖಂಡರು ಸನ್ಮಾನಿಸಿದರು.
ಇದನ್ನೂ ಓದಿ: ದೇವರು ನಡೆದಾಡಿ ನೆಲೆಸಿದ ಸಿದ್ದಗಂಗಾ ಅಂದ್ರೇ ಸೌಹಾರ್ದತೆ.. ಶ್ರೀಮಠದಲ್ಲಿ ಉಪವಾಸ ಬಿಟ್ಟ ಮುಸ್ಲಿಂ ಬಾಂಧವರು..
ಇಲ್ಲಿನ ಆಂಜನೇಯ ದೇವಸ್ಥಾನ ಸಮಿತಿಯ ಅಧ್ಯಕ್ಷರೂ ಆಗಿರುವ ಕೆ.ಸಿ.ರಾಜಪ್ಪ ಮಾತನಾಡಿ, 'ಅಣಬೇರು ಗ್ರಾಮದಲ್ಲಿ ಆರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿಯತನಕ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಂದಿಗೂ ಗ್ರಾಮದಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಸಾಕಷ್ಟು ಶಕ್ತಿಗಳು ಪ್ರಯತ್ನಿಸುತ್ತಿವೆ. ಅಂತಹ ಘಟನೆಗಳು ನೋಡಿದ್ರೆ ಬೇಸರ ಆಗುತ್ತೆ. ನಾವೆಲ್ಲಾ ಒಂದೇ ತಾಯಿ ಮಕ್ಕಳಂತೆ ಜೀವನ ನಡೆಸುವುದರಲ್ಲಿ ತಪ್ಪೇನಿದೆ?' ಎಂದರು.