ದಾವಣಗೆರೆ: ಒಮಿಕ್ರಾನ್ ಸೋಂಕಿನ ಆತಂಕ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಡಳಿತ ಮನೆ ಮನೆ ಲಸಿಕಾ ಕಾರ್ಯಕ್ರಮ ಹಾಗು ಸ್ಯ್ವಾಬ್ ಟೆಸ್ಟ್ ಮಾಡಲು ಮುಂದಾಗಿದೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಇಡೀ ಜಿಲ್ಲಾಡಳಿತ ನರ್ಸಿಂಗ್, ಮೆಡಿಕಲ್ ಕಾಲೇಜುಗಳ ಮೇಲೆ ನಿಗಾ ಇರಿಸಿದೆ. ಇದಲ್ಲದೇ ಸರ್ಕಾರದ ಆದೇಶದ ಮೇರೆಗೆ ದಾವಣಗೆರೆಯ ಎಲ್ಲಾ ಮೆಡಿಕಲ್, ನರ್ಸಿಂಗ್ ಹಾಗು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಯ್ವಾಬ್ ಟೆಸ್ಟ್ ಮಾಡಲು ಆರಂಭಿಸಿದೆ.
ಡಿ.1 ರಿಂದ ಇಲ್ಲಿಯವರೆಗೆ 3,138 ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ಗಂಟಲು ದ್ರವ ಪರೀಕ್ಷೆ ಮಾಡಿದೆ. ಅದರಲ್ಲಿ 1,758 ವಿದ್ಯಾರ್ಥಿಗಳಿಗಳ ವರದಿ ನೆಗೆಟಿವ್ ಬಂದಿರುವುದು ಕೊಂಚ ಸಮಾಧಾನ ತರಿಸಿದೆ. ಉಳಿದ ವರದಿಗಳು ಇಂದು ಬರಲಿದೆ.
ಇದನ್ನೂ ಓದಿ:ತುಮಕೂರು: ಅತ್ಯಾಚಾರ-ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಇಬ್ಬರು ಅರೆಸ್ಟ್