ETV Bharat / city

ಕಿಂಗ್ ಪಿನ್ ಬಗ್ಗೆ ಮಾಹಿತಿ ಕೊಟ್ಟರೆ ಸಚಿವ ಸ್ಥಾನದಿಂದ ಗಂಟು ಮೂಟೆ ಕಟ್ಟಬೇಕಾಗುತ್ತೆ: ಆರಗ ಜ್ಞಾನೇಂದ್ರಗೆ HDK ಟಾಂಗ್ - ಅರಗ ಜ್ಞಾನೇಂದ್ರಗೆ ಹೆಚ್ಡಿಕೆ ಟಾಂಗ್

ಕಿಂಗ್ ಪಿನ್ ಬಗ್ಗೆ ಮಾಹಿತಿ ನೀಡಿದರೆ ಆರಗ ಜ್ಞಾನೇಂದ್ರ ಅವರು ಸಚಿವ ಸ್ಥಾನದಿಂದ ಗಂಟುಮೂಟೆ ಕಟ್ಟಬೇಕಾಗುತ್ತದೆ. ಅವರ ಬಳಿಯೇ ಮಾಹಿತಿ ಇಟ್ಟು ಕೊಂಡು ಕಿಂಗ್​ಪಿನ್​ ಹೆಸರು ಹೇಳಿ ಎಂದು ನಮ್ಮನ್ನು ಕೇಳುತ್ತಾರೆ. ಅಕ್ರಮ ಮಾಡಿಸಿದವರಿಗೆ ಗೊತ್ತಿಲ್ಲವೇ ಯಾರು ಎಂಬುದು ಎಂದು ಹೆಚ್​​ಡಿಕೆ ಟಾಂಗ್​ ಕೊಟ್ಟಿದ್ದಾರೆ.

H. D. Kumaraswamy reaction about Araga Jnanendra statement
ಕಿಂಗ್ ಪಿನ್ ಬಗ್ಗೆ ಮಾಹಿತಿ ಕೊಟ್ಟರೆ ಸಚಿವ ಸ್ಥಾನದಿಂದ ಗಂಟು ಮೂಟೆ ಕಟ್ಟಬೇಕಾಗುತ್ತದೆ
author img

By

Published : May 7, 2022, 9:13 PM IST

ದಾವಣಗೆರೆ: ಕಿಂಗ್ ಪಿನ್ ಬಗ್ಗೆ ಮಾಹಿತಿ ಕೊಟ್ಟರೆ ಸಚಿವ ಸ್ಥಾನದಿಂದ ನೀವು ಗಂಟು ಮೂಟೆ ಕಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗೃಹ ಸಚಿವರಿಗೆ ಟಾಂಗ್​ ಕೊಟ್ಟಿದ್ದಾರೆ. ತಪ್ಪು ಮುಚ್ಚಿಕೊಳ್ಳಲು ಸಚಿವ ಆರಗ ಜ್ಞಾನೇಂದ್ರ ದಾಖಲೆ ಬಿಡುಗಡೆ ಮಾಡಿ, ಸರ್ಕಾರ ಹೋದರೆ ಹೋಗಲಿ ಎಂಬ ಸವಾಲ್ ಹಾಕಿದ್ದಾರೆ ಎಂದು ಹೆಚ್​​ಡಿಕೆ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮಾತನಾಡಿದ ಅವರು, ಪಿಎಸ್ಐ ಅಕ್ರಮ ನೇಮಕಾತಿ ಕಿಂಗ್ ಪಿನ್ ಬಗ್ಗೆ ನಾನು ದಾಖಲೆ ಕೊಡಲು ತಯಾರಿದ್ದೇನೆ. ನಿಮ್ಮ ಸ್ಥಾನ ಮೊದಲು ಬಿಗಿ ಮಾಡಿಕೊಳ್ಳಿ. ಬಿಜೆಪಿ ಸರ್ಕಾರ ಹೋಗುವುದರ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಇವರಿಗಿಲ್ಲ. ಬಿಜೆಪಿ ಪಕ್ಷವನ್ನು ನೋಡಿದ್ದೇನೆ ಕೊನೆ ಸಭೆ ಆಗುವರೆಗೂ ಅಧಿಕಾರದಿಂದ ಹೋಗಲ್ಲ ಎಂದರು.

ಖರ್ಗೆಯವರ ಬಂಟರು ಕಿಂಗ್ ಪಿನ್: ಖರ್ಗೆಯವರ ಬಂಟರು ಇದರಲ್ಲಿ ಮಾಸ್ಟರ್ ಮೈಂಡ್, ಕಿಂಗ್ ಪಿನ್ ಎಂದು ಗೃಹ ಸಚಿವರು ಹೇಳಿದ್ದಾರೆ. ತನಿಖೆ ಹಂತದಲ್ಲೇ ಆರೋಪ ಸಾಬೀತು ಮಾಡಿದಂತೆ ಆಗಲಿಲ್ಲವೇ ಎಂದು ಪ್ರಶ್ನಿಸಿರುವ ಮಾಜಿ ಸಿಎಂ ಸಾಲಸೋಲ ಮಾಡಿ ಹಣ ಕೊಟ್ಟು ಬೀದಿಗೆ ಬಂದಿದ್ದಾರೆ, ಅವರಿಗಾದ ಅನ್ಯಾಯ ಸರಿಪಡಿಸುತ್ತಾರಾ ಅಂತಾ ಕಾದು ನೋಡುತ್ತೇನೆ ಎಂದರು.

ಇದನ್ನೂ ಓದಿ: ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ : ಒಳ್ಳೆಯದಾಗಲಿ ಎಂದ‌ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.