ETV Bharat / city

ಮನೆಗೆ ಬಂದ ಯುವಕನಿಗೆ ಬೆಂಕಿ ಹಚ್ಚಿದ ಪ್ರೇಯಸಿ... ಕಾರಣ? - ಹರಪನಹಳ್ಳಿ ಯುವಕನಿಗೆ ಪ್ರೇಯಸಿ ಬೆಂಕಿ

ಪ್ರೀತಿಸಿದ ಯುವಕನಿಗೆ ಕೋಪದಲ್ಲಿ ಯುವತಿ ಬೆಂಕಿ ಹಚ್ಚಿದ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಸಮೀಪದ ವಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

girl-set-fire-to-her-lover
ಮನೆಗೆ ಬಂದ ಯುವಕನಿಗೆ ಬೆಂಕಿ ಹಚ್ಚಿದ ಪ್ರೇಯಸಿ
author img

By

Published : Jan 21, 2020, 2:01 PM IST

ದಾವಣಗೆರೆ: ಪ್ರೀತಿಸುತ್ತಿದ್ದ ಯುವಕನ ಮೇಲೆ ಪ್ರಿಯತಮೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಸಮೀಪದ ವಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪರಸಪ್ಪ ಎಂಬಾತ ಗಂಭೀರವಾಗಿ ಗಾಯಗೊಂಡ ಯುವಕ. ಅದೇ ಗ್ರಾಮದ ಆತನ ಪ್ರೇಯಸಿ ಬೆಂಕಿ ಹಚ್ಚಿದ್ದಾಳೆ. ಯುವಕ ಗಾಯಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಘಟನೆಯ ಹಿನ್ನೆಲೆ...?

ಮನೆಗೆ ಬಂದ ಯುವಕನಿಗೆ ಬೆಂಕಿ ಹಚ್ಚಿದ ಪ್ರೇಯಸಿ .

ವಡ್ಡಿನಹಳ್ಳಿ ಗ್ರಾಮದ ಪರಸಪ್ಪ ಹಾಗೂ ಅದೇ ಗ್ರಾಮದ ಯುವತಿ ಬೇರೆ ಬೇರೆ ಜಾತಿಯವರಾಗಿದ್ದು, ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಯುವತಿಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಡೆದಿತ್ತು.

ಇದರಿಂದ ಸಿಟ್ಟಿಗೆದ್ದ ಪರಸಪ್ಪ, ಯುವತಿಯ ಮನೆಗೆ ತೆರಳಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಯುವತಿಯು ಪರಸಪ್ಪನ ಮೇಲೆ‌ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾಳೆ. ಇದರಿಂದ ತಪ್ಪಿಸಿಕೊಳ್ಳಲು ಯುವಕ ಬಣವೆಗೆ ಮೈ ಉಜ್ಜಿದ್ದಾನೆ. ಬಳಿಕ ಅದೇ ಬೆಂಕಿ ಹುಲ್ಲಿನ ಬಣವೆಗೂ ತಾಗಿದ್ದರಿಂದ ಬಣವೆಯೂ ಸುಟ್ಟು ಹೋಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಯುವಕನನ್ನು ರಕ್ಷಿಸಿದ್ದಾರೆ. ಮೈತುಂಬಾ ಸುಟ್ಟ ಗಾಯದಿಂದ ಅಸ್ವಸ್ಥಗೊಂಡಿದ್ದ ಪರಸಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಸೀಕೆರೆ ಪೊಲೀಸರು ಬೆಂಕಿ ಹಚ್ಚಿದ ಯುವತಿಯ ಪತ್ತೆಗೆ ಬಲೆ ಬೀಸಿದ್ದಾರೆ.

Intro:KN_DVG_01_21_PREMIGE_BENKI_SCRIPT_7203307

ರಿಪೋರ್ಟರ್ : ಯೋಗರಾಜ್

ಐದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರಿಯತಮನಿಗೆ ಯುವತಿ ಬೆಂಕಿ ಹಚ್ಚಿದ್ದೇಕೆ...?

ದಾವಣಗೆರೆ: ಪ್ರೀತಿಸುತ್ತಿದ್ದ ಯುವಕನ ಮೇಲೆ ಪ್ರಿಯತಮೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಸಮೀಪದ ವಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪರಸಪ್ಪ ಎಂಬಾತ ಗಂಭೀರವಾಗಿ ಗಾಯಗೊಂಡಾತ. ಅದೇ ಗ್ರಾಮದ ಆತನ ಪ್ರಿಯತಮೆ ಲಕ್ಷ್ಮಿ ಬೆಂಕಿ ಹಚ್ಚಿದ ಯುವತಿ. ಪರಸಪ್ಪನಿಗೆ ಬೆಂಕಿ ಹಚ್ಚಿದ ಬಳಿಕ ಗಾಯಗೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಘಟನೆಯ ಹಿನ್ನೆಲೆ...?

ವಡ್ಡಿನಹಳ್ಳಿ ಗ್ರಾಮದ ಪರಸಪ್ಪ ಹಾಗೂ ಲಕ್ಷ್ಮೀ ಬೇರೆ ಬೇರೆ ಜಾತಿಯವರಾಗಿದ್ದು, ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಲಕ್ಷ್ಮೀಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಡೆದಿತ್ತು.

ಇದರಿಂದ ಸಿಟ್ಟಿಗೆದ್ದ ಪರಸಪ್ಪನು ಲಕ್ಷ್ಮೀ ಮನೆಗೆ ತೆರಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಲಕ್ಷ್ಮೀಯು ಪರಸಪ್ಪನ ಮೇಲೆ‌ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾಳೆ. ಇದರಿಂದ ತಪ್ಪಿಸಿಕೊಳ್ಳಲು ಬಣವೆಗೆ ಮೈ ಉಜ್ಜಿದ್ದಾನೆ. ಹುಲ್ಲಿನ ಬಣವೆಯೂ ಬೆಂಕಿಗೆ ಆಹುತಿಯಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಯುವಕನನ್ನು ರಕ್ಷಿಸಿದ್ದು, ಮೈತುಂಬಾ ಸುಟ್ಟ ಗಾಯದಿಂದ ಅಸ್ವಸ್ಥಗೊಂಡಿದ್ದ ಪರಸಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಸೀಕೆರೆ ಪೊಲೀಸರು ಬೆಂಕಿ ಹಚ್ಚಿದ ಪ್ರಿಯತಮೆ ಪತ್ತೆಗೆ ಬಲೆ ಬೀಸಿದ್ದಾರೆ.Body:KN_DVG_01_21_PREMIGE_BENKI_SCRIPT_7203307

ರಿಪೋರ್ಟರ್ : ಯೋಗರಾಜ್

ಐದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರಿಯತಮನಿಗೆ ಯುವತಿ ಬೆಂಕಿ ಹಚ್ಚಿದ್ದೇಕೆ...?

ದಾವಣಗೆರೆ: ಪ್ರೀತಿಸುತ್ತಿದ್ದ ಯುವಕನ ಮೇಲೆ ಪ್ರಿಯತಮೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಸಮೀಪದ ವಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪರಸಪ್ಪ ಎಂಬಾತ ಗಂಭೀರವಾಗಿ ಗಾಯಗೊಂಡಾತ. ಅದೇ ಗ್ರಾಮದ ಆತನ ಪ್ರಿಯತಮೆ ಲಕ್ಷ್ಮಿ ಬೆಂಕಿ ಹಚ್ಚಿದ ಯುವತಿ. ಪರಸಪ್ಪನಿಗೆ ಬೆಂಕಿ ಹಚ್ಚಿದ ಬಳಿಕ ಗಾಯಗೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಘಟನೆಯ ಹಿನ್ನೆಲೆ...?

ವಡ್ಡಿನಹಳ್ಳಿ ಗ್ರಾಮದ ಪರಸಪ್ಪ ಹಾಗೂ ಲಕ್ಷ್ಮೀ ಬೇರೆ ಬೇರೆ ಜಾತಿಯವರಾಗಿದ್ದು, ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಲಕ್ಷ್ಮೀಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಡೆದಿತ್ತು.

ಇದರಿಂದ ಸಿಟ್ಟಿಗೆದ್ದ ಪರಸಪ್ಪನು ಲಕ್ಷ್ಮೀ ಮನೆಗೆ ತೆರಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಲಕ್ಷ್ಮೀಯು ಪರಸಪ್ಪನ ಮೇಲೆ‌ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾಳೆ. ಇದರಿಂದ ತಪ್ಪಿಸಿಕೊಳ್ಳಲು ಬಣವೆಗೆ ಮೈ ಉಜ್ಜಿದ್ದಾನೆ. ಹುಲ್ಲಿನ ಬಣವೆಯೂ ಬೆಂಕಿಗೆ ಆಹುತಿಯಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಯುವಕನನ್ನು ರಕ್ಷಿಸಿದ್ದು, ಮೈತುಂಬಾ ಸುಟ್ಟ ಗಾಯದಿಂದ ಅಸ್ವಸ್ಥಗೊಂಡಿದ್ದ ಪರಸಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಸೀಕೆರೆ ಪೊಲೀಸರು ಬೆಂಕಿ ಹಚ್ಚಿದ ಪ್ರಿಯತಮೆ ಪತ್ತೆಗೆ ಬಲೆ ಬೀಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.