ETV Bharat / city

ಹಳೇ ದ್ವೇಷ.. ಎರಡು ಗುಂಪುಗಳ ನಡುವೆ ಗಲಾಟೆ.. ಇಬ್ಬರಿಗೆ ಚಾಕು ಇರಿತ - Fight between two groups

ಬಿಜೆಪಿ ಮುಖಂಡ ಯಶವಂತರಾವ್ ಜಾದವ್​ಗೆ ಕೇಕ್ ಕತ್ತರಿಸಿ, ಕಾರ್ಯಕ್ರಮದಿಂದ ಹೊರ ಬಂದ ಬಳಿಕ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.

ಹಳೇ ದ್ವೇಷ
ಹಳೇ ದ್ವೇಷ
author img

By

Published : Jun 30, 2022, 10:08 AM IST

Updated : Jun 30, 2022, 1:04 PM IST

ದಾವಣಗೆರೆ: ಕೇವಲ ಬೈಕ್ ತಾಕಿದ್ದಕ್ಕಾಗಿ ಎರಡು ಗುಂಪುಗಳ ಯುವಕರ ನಡುವೆ ನಡೆದ ಗಲಾಟೆ ಹಳೇ ದ್ವೇಷಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಅ ಜಗಳ ಚೂರಿ ಇರಿಯುವ ಹಂತಕ್ಕೆ ತಲುಪಿದೆ. ನಿನ್ನೆ ದಾವಣಗೆರೆ ನಗರದ ಹೊಂಡದ ವೃತ್ತದಲ್ಲಿ‌ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಯುವಕರಿಗೆ ಚಾಕು ಇರಿಯಲಾಗಿದೆ.

ನಿಟ್ಟುವಳ್ಳಿಯ ವೀರೇಶ್, ಮೋಹನ್ ಚಾಕು ಇರಿತಕ್ಕೆ ಒಳಗಾದ ಯುವಕರು. ಹೊಂಡಾ ವೃತ್ತದ ನಿವಾಸಿ ನೆಕ್ ಪ್ರದೀಪ್, ಸಂತು, ಅಭಿ ಹಲ್ಲೆ‌ ಮಾಡಿದ ಆರೋಪಿಗಳು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಹುಟ್ಟುಹಬ್ಬ ಆಚರಣೆ ಮಾಡುವಾಗ ಗಲಾಟೆ ನಡೆದಿದೆ.

ದಾವಣಗೆರೆಯಲ್ಲಿ ಇಬ್ಬರಿಗೆ ಚಾಕು ಇರಿತ

ಇಬ್ಬರು ಗಾಯಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಎಸ್​ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಂಡದ ವೃತ್ತದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಹಳೇ ವೈಷಮ್ಯದ ಹಿನ್ನೆಲೆ ಚೂರಿ ಇರಿತ: ಗಾಯಳುಗಳಾದ ವೀರೇಶ್, ಮೋಹನ್ ಸಹೋದರರು. ದಾವಣಗೆರೆ ನಗರದ ನಿಟ್ಟುವಳ್ಳಿಯಲ್ಲಿರುವ ಮಂಜುನಾಥ ಪದವಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡ್ತಿದ್ದ ವೇಳೆ ಬೈಕ್ ತಾಕಿದ್ದರಿಂದ ವೀರೇಶ್, ಮೋಹನ್ ಹಾಗೂ ಆರೋಪಿಗಳಾದ ನೆಕ್ ಪ್ರದೀಪ್, ಸಂತು,ಅಭಿ ಎರಡು ಗುಂಪುಗಳ ನಡುವೆ ದೊಡ್ಡ ಜಗಳವಾಗಿತ್ತು. ಇದೀಗ ಅ ಜಗಳ ಮರುಕಳಿಸಿದ್ದು, ಚೂರಿ ಇರಿಯಲಾಗಿದೆ.

ಮಾಜಿ ಜಿಲ್ಲಾಧ್ಯಕ್ಷನ ಹುಟ್ಟುಹಬ್ಬದಲ್ಲಿ ನಡೆದ ಗಲಾಟೆ: ಬಿಜೆಪಿ ಮುಖಂಡ ಹಾಗೂ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷನ ಹುಟ್ಟುಹಬ್ಬದ ಪ್ರಯುಕ್ತ ಹೊಂಡದ ವೃತ್ತದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಕಾರ್ಯಕ್ರಮಕ್ಕೆ ಗಾಯಳುಗಳಾದ ವೀರೇಶ್ ಹಾಗೂ ಮೋಹನ್ ಇಬ್ಬರು ಆಗಮಿಸಿ ಬಿಜೆಪಿ ಮುಖಂಡ ಯಶವಂತರಾವ್ ಜಾದವ್​ಗೆ ಕೇಕ್ ಕತ್ತರಿಸಿ, ಕಾರ್ಯಕ್ರಮದಿಂದ ಹೊರ ಬಂದ ಬಳಿಕ ಈ ಎರಡು ಗುಂಪುಗಳ ನಡುವೆ ಮತ್ತೆ ಗಲಾಟೆ ನಡೆದಿದೆ.

ಗಲಾಟೆಯಲ್ಲಿ ಸಹೋದರಾದ ವೀರೇಶ್ ಹಾಗೂ ಮೋಹನ್ ಮೇಲೆ ನೆಕ್ ಪ್ರದೀಪ್ ಗ್ಯಾಂಗ್ ಹಲ್ಲೆ ಮಾಡಿ ಚೂರಿ ಇರಿದಿದ್ದಾರೆ. ಇಬ್ಬರ ಕೈ, ಕಾಲಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಹಗಲು ಸೂಪರ್ ವೈಸರ್.. ರಾತ್ರಿ ಕದ್ದ ದ್ವಿಚಕ್ರ ವಾಹನಗಳಲ್ಲಿ ಜಾಲಿ ರೈಡರ್: ರಾಜಾಜಿನಗರ ಪೊಲೀಸರ ಬಲೆಗೆ ಬಿದ್ದ ಭಲೇ ಕಿಲಾಡಿ

Last Updated : Jun 30, 2022, 1:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.