ಹರಿಹರ: ಇಲ್ಲಿನ ಗಾಂಧಿ ಮೈದಾನದಲ್ಲಿ ಬೆಳ್ಳೂಡಿಯ ಕಾರ್ಗಿಲ್ ಕಂಪನಿ ಸಿಬ್ಬಂದಿ ಹಾಗೂ ಪಿಎಸ್ಐ ಭಾರತಿ ಕಂಕಣವಾಡಿ ಅವರ ನೇತೃತ್ವದಲ್ಲಿ 500 ಆಟೋ ಚಾಲಕರಿಗೆ ಕಿಟ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಕವನ ಕಾವೇರಪ್ಪ, ಕೋವಿಡ್-19ನಿಂದ ಆಟೋ ಚಾಲಕರು ತಮ್ಮ ಜೀವನ ನಡೆಸುವುದು ಕಷ್ಟವಾಗಿತ್ತು. ಹೀಗಾಗಿ, 500 ಆಟೋ ಚಾಲಕರಿಗೆ ಕಿಟ್ ವಿತರಿಸಿದ್ದೇವೆ ಎಂದು ಹೇಳಿದರು.
ಕಂಪನಿಯ ವತಿಯಿಂದ ಈಗಾಗಲೇ ಮೂರೂವರೆ ಸಾವಿರ ಕಿಟ್ಗಳನ್ನು ಬಡವರಿಗೆ ಹಾಗೂ ನಿರ್ಗತಿಕರಿಗೆ ವಿತರಿಸಲಾಗುತ್ತಿದೆ. ತಾಲೂಕಿನ ಎಲ್ಲ ಬಡವರಿಗೂ ಆಹಾರದ ಕಿಟ್ಗಳನ್ನು ನೀಡಲಾಗುವುದು ಎಂದರು.
ಅಪರಾಧ ವಿಭಾಗದ ಪಿಎಸ್ಐ ಭಾರತಿ ಕಂಕಣವಾಡಿ ಮಾತನಾಡಿ, ಆಟೋ ಚಾಲಕರು ಗ್ರಾಹಕರನ್ನು ಕರೆದುಕೊಂಡು ಹೋಗುವಾಗ ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ನೀವು ಎಷ್ಟು ಎಚ್ಚರವಾಗಿ ಇರುತ್ತೀರೋ ಅಷ್ಟು ನಿಮ್ಮ ಕುಟುಂಬ ಸುರಕ್ಷಿತವಾಗಿರುತ್ತದೆ ಎಂದು ಸಲಹೆ ನೀಡಿದರು.