ಬೆಂಗಳೂರು: ಮಾರಣಾಂತಿಕ ಕೊರೊನಾ ವೈರಸ್ಗೆ ಬೆಳ್ಳಂಬೆಳಿಗ್ಗೆ ಮತ್ತೊಂದು ಬಲಿಯಾಗಿದೆ. ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 60 ವರ್ಷದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕೊರೊನಾ ಬಲಿಪಡೆದ 34ನೇ ವ್ಯಕ್ತಿ ಇವರಾಗಿದ್ದಾರೆ. ಆಂಧ್ರ ಪ್ರದೇಶ ಮೂಲದ ರೋಗಿ ಸಂಖ್ಯೆ 796 ಮೃತಪಟ್ಟಿದ್ದು, ಇವರಿಗೆ ಮೇ 10 ರಂದು ಕೋವಿಡ್-19 ದೃಢಪಟ್ಟಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು. ಇಂದು ವಿಕ್ಟೋರಿಯಾದಲ್ಲಿ ಸಾವನ್ನಪ್ಪಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು 34 ಜನ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.