ETV Bharat / city

ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ ದಾವಣಗೆರೆ ಮಹಿಳೆ ಸ್ವದೇಶಕ್ಕೆ ವಾಪಸ್‌ - ಸೌದಿ ಅರೇಬಿಯಾ

ಸಕಾಕಹ್‌ನಲ್ಲಿ ಇರುವ ಕೇರಳದ ಸಲೀಂ ಎಂಬುವರ ನೆರವು ಪಡೆದುಕೊಂಡು ಅಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಭಾರತದ ವಿದೇಶಾಂಗ ಸಚಿವಾಲಯದ ಗಮನಕ್ಕೂ ತಂದಿದ್ದರು. ಜತೆಗೆ ಅಲ್ಲಿ ಹ್ಯೂಮನ್‌ ರೈಟ್ಸ್‌ ಕಮಿಷನ್‌ನ ಗಮನಕ್ಕೆ ತರಲಾಗಿತ್ತು..

Davanagere woman returns home from stranded in Saudi Arabia
ದಾವಣಗೆರೆ ಮಹಿಳೆ ಸ್ವದೇಶಕ್ಕೆ ವಾಪಸ್‌
author img

By

Published : Jun 21, 2021, 9:35 PM IST

ದಾವಣಗೆರೆ : ವರ್ಷಗಳ ಹಿಂದೆ ಉದ್ಯೋಗ ಅರಸಿ ಸೌದಿ ಅರೇಬಿಯಾ ದೇಶಕ್ಕೆ ತೆರಳಿದ್ದ ಮಹಿಳೆ ಅಲ್ಲಿಯೇ ಸಿಲುಕಿದ್ದರು. ಆದರೆ, ಸೌದಿಯಲ್ಲಿರುವ ಕನ್ನಡಿಗರು ಮಾಡಿದ ಹೋರಾಟ ಮತ್ತು ಭಾರತ ಸರ್ಕಾರದ ಒತ್ತಡ ಮರಳಿ ಮಹಿಳೆ ತವರಿಗೆ ಬರುವಂತೆ ಮಾಡಿದೆ.

ಶಿವನಗರದ ನಿವಾಸಿ ಮಕ್ಬುಲ್‌ಸಾಬ್‌ ಅವರ ಮಗಳು ಫೈರೋಜಾ ಬಾನು ಭಾರತಕ್ಕೆ ವಾಪಸಾದವರು. ಫೈರೋಜಾ ಬಾನುಗೆ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೂರು ಮಕ್ಕಳಾದ ಮೇಲೆ ಗಂಡನೂ ಬಿಟ್ಟು ಹೋಗಿದ್ದ.

ಹೊಟ್ಟೆಪಾಡಿಗಾಗಿ ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಫೈರೋಜಾ ಬಾನು ತೆರಳಿದ್ದು, ತಾಯಿ ಮೃತಪಟ್ಟಾಗ ನೋಡಲು ಕೂಡ ಕಳುಹಿಸಿಕೊಡದೆ ವೇತನವನ್ನೂ ನೀಡಿರಲಿಲ್ಲ. ಅವರನ್ನು ಹೇಗಾದರೂ ಭಾರತಕ್ಕೆ ಕರೆಸಿ ಎಂದು ಆಕೆಯ ಸಹೋದರಿ ನಸ್ರೀನ್‌ಬಾನು ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.

ಸೌದಿಯ ರಿಯಾದ್‌ನಲ್ಲಿ ಇರುವ ಪಡುಬಿದ್ರಿಯ ಹಮೀದ್‌ ನಸ್ರೀನ್​ಬಾನು ಮನವಿಗೆ ಸ್ಪಂದಿಸಿದ್ದರು. ಅವರಿಗೆ ದಮಾಮ್‌ನಲ್ಲಿ ಇರುವ ಕಲಬುರ್ಗಿಯ ಯಾಸಿನ್‌ ಕೈ ಜೋಡಿಸಿದ್ದರು. ಈ ಇಬ್ಬರ ಪ್ರಯತ್ನದಿಂದ ಸೌದಿ ರಾಜಧಾನಿ ರಿಯಾದ್‌ನಿಂದ ಸುಮಾರು ಸಾವಿರ ಕಿಲೋಮೀಟರ್ ದೂರ ಇರುವ ಸಕಾಕಹ್‌ನಲ್ಲಿ ಫೈರೋಜಾ ಬಾನು ಇರುವುದು ಪತ್ತೆಯಾಗಿತ್ತು.

ಸಕಾಕಹ್‌ನಲ್ಲಿ ಇರುವ ಕೇರಳದ ಸಲೀಂ ಎಂಬುವರ ನೆರವು ಪಡೆದುಕೊಂಡು ಅಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಭಾರತದ ವಿದೇಶಾಂಗ ಸಚಿವಾಲಯದ ಗಮನಕ್ಕೂ ತಂದಿದ್ದರು. ಜತೆಗೆ ಅಲ್ಲಿ ಹ್ಯೂಮನ್‌ ರೈಟ್ಸ್‌ ಕಮಿಷನ್‌ನ ಗಮನಕ್ಕೆ ತರಲಾಗಿತ್ತು.

ಈ ಎಲ್ಲರ ಪ್ರಯತ್ನದ ಫಲವಾಗಿ ಫೈರೋಜ್‌ ಬಾನು ಅವರ ಕಫೀಲ್‌ (ಪ್ರಾಯೋಜಕ) ಭಾರತಕ್ಕೆ ಕಳುಹಿಸಿಕೊಡಲು ಒಪ್ಪಿದ್ದಾನೆ. ಅದರಂತೆ ಸಕಾಕಹ್‌ನಿಂದ ಕತಾರ್‌ಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ.

For All Latest Updates

TAGGED:

Saudi Arabia
ETV Bharat Logo

Copyright © 2025 Ushodaya Enterprises Pvt. Ltd., All Rights Reserved.