ETV Bharat / city

ಹಿರಿತನವಿದ್ದರೂ ನನಗೆ ಮೇಯರ್​ ಸ್ಥಾನ ನೀಡಲಿಲ್ಲ, ಅದಕ್ಕೆ ಚುನಾವಣೆಗೆ ಗೈರಾದೆ: ಶ್ರೀನಿವಾಸ್ ಸ್ಪಷ್ಟಣೆ - ದಾವಣಗೆರೆ ಕಾರ್ಪೊರೇಟರ್ ಜೆ ಎನ್ ಶ್ರೀನಿವಾಸ್​

ನನಗೆ ಮೇಯರ್ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಮನಸ್ಸಿಗೆ ತುಂಬಾ ನೋವಾಗಿತ್ತು. ಹೇಳಿಕೊಳ್ಳಲು ಆಗಲ್ಲ ಎಂದು ಅದಕ್ಕೆ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಗೈರಾಗಿದ್ದೆ ಎಂದು ಕಾಂಗ್ರೆಸ್ ಕಾರ್ಪೊರೇಟರ್ ಜೆ. ಎನ್‌. ಶ್ರೀನಿವಾಸ್ ಹೇಳಿದ್ದಾರೆ.

davanagere-municipality-mayor-election-latest-news
ದಾವಣಗೆರೆ ಕಾರ್ಪೊರೇಟರ್ ಜೆ ಎನ್ ಶ್ರೀನಿವಾಸ್
author img

By

Published : Feb 20, 2020, 1:44 PM IST

ದಾವಣಗೆರೆ: ಮೇಯರ್ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡದಿರುವುದೇ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಗೈರಾಗಲು ಕಾರಣ ಎಂದು ಕಾಂಗ್ರೆಸ್ ಕಾರ್ಪೊರೇಟರ್ ಜೆ. ಎನ್‌. ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.

ಕೆಟಿಜಿ ನಗರದಲ್ಲಿ ಮಾತನಾಡಿದ ಅವರು, ನನಗೆ ಮೇಯರ್ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ತುಂಬಾ ಮನಸ್ಸಿಗೆ ನೋವಾಗಿತ್ತು. ಹೇಳಿಕೊಳ್ಳಲು ಆಗಲ್ಲ. ಹಿರಿತನ ಇದ್ದರೂ ನಮ್ಮನ್ನು ಪರಿಗಣಿಸದೇ ಪ್ರಥಮ ಬಾರಿಗೆ ಗೆದ್ದ ಹೊಸಬರಿಗೆ ಅವಕಾಶ ಕೊಡಲಾಗಿದೆ. ಇದರಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ ಆಗಿ ಆಸ್ಪತ್ರೆಗೆ ಹೋಗಿದ್ದೆ. ನನ್ನ ಪತ್ನಿಯೂ ಪಾಲಿಕೆ ಸದಸ್ಯೆ. ಆಕೆಗಾದರೂ ಮೇಯರ್ ಸ್ಥಾನ ನೀಡಬಹುದಿತ್ತಲ್ವಾ? ಎಂದು ಪ್ರಶ್ನಿಸಿದರು.

ಹಿರಿತನವಿದ್ದರೂ ನನಗೆ ಮೇಯರ್​ ಸ್ಥಾನ ನೀಡಿರಲಿಲ್ಲ, ಅದಕ್ಕೆ ಚುನಾಣೆಗೆ ಗೈರಾಗಿದ್ದೆ: ಕಾರ್ಪೊರೇಟರ್ ಶ್ರೀನಿವಾಸ್ ಸ್ಪಷ್ಟಣೆ

ಶಾಮನೂರು ಶಿವಶಂಕರಪ್ಪರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮನ್ನೇನು ಬಿಜೆಪಿಯವರು ಕಿಡ್ನಾಪ್ ಮಾಡಿಲ್ಲ. ಯಾರೂ ಹಣ ನೀಡಿಲ್ಲ. ಇದು ಸತ್ಯಕ್ಕೆ ದೂರವಾದುದು. ನಾನಿನ್ನೂ ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಬಿಜೆಪಿ ಜೊತೆ ಗುರುತಿಸಿಕೊಂಡಿಲ್ಲ. ಯಾವ ಕಮಲ ನಾಯಕರೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪಕ್ಷ ವಿರೋಧಿ ಚಟುವಟಿಕೆ ಆರೋಪ ಕುರಿತು ಮಾತನಾಡಿದ ಅವರು, ನನಗೂ ಕಾನೂನು, ಕೋರ್ಟ್ ಗೊತ್ತಿದೆ. ಅಲ್ಲಿ ಹೋರಾಟ ಮಾಡುತ್ತೇನೆ. ಕಳೆದ ಬಾರಿ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿರುವ ನನಗಾಗಲೀ ಇಲ್ಲ, ಹಲವು ಬಾರಿ ಗೆದ್ದ ಸದಸ್ಯರನ್ನ ಮೇಯರ್ ಮಾಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ನನಗೆ ನನ್ನ ವಾರ್ಡ್ ನ ಜನರ ಕೆಲಸ ಆಗಬೇಕು ಅಷ್ಟೇ ಎಂದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.