ETV Bharat / city

ದಾವಣಗೆರೆ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆ: ನಗರದಾದ್ಯಂತ ಪೊಲೀಸ್ ಬಂದೋಬಸ್ತ್ - ದಾವಣಗೆರೆಯ ಮಹಾನಗರ ಪಾಲಿಕೆ ಬಳಿ ಬಂದೋ ಬಸ್ತ್

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ರೋಚಕ ಘಟ್ಟದತ್ತ ತಲುಪಿದೆ. ಈ ಹಿನ್ನೆಲೆ ಯಾವೂದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

KN_DVG_01_BANDHOBASTH_AVB_KA10016
ದಾವಣಗೆರೆ: ಮೇಯರ್-ಉಪಮೇಯರ್ ಚುನಾವಣೆ, ನಗರದಾದ್ಯಂತ ಪೊಲೀಸ್ ಬಂದೋಬಸ್ತ್: ಎಸ್ಪಿ ಹನುಮಂತರಾಯ
author img

By

Published : Feb 18, 2020, 8:07 PM IST

ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ರೋಚಕ ಘಟ್ಟದತ್ತ ತಲುಪಿದೆ. ಈ ಹಿನ್ನೆಲೆ ಯಾವೂದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ದಾವಣಗೆರೆ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆ, ನಗರದಾದ್ಯಂತ ಪೊಲೀಸ್ ಬಂದೋಬಸ್ತ್

ದಾವಣಗೆರೆಯ ಮಹಾನಗರ ಪಾಲಿಕೆ ಬಳಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎರಡು ಕೆಎಸ್ಆರ್​​ಪಿ, ನಾಲ್ಕು ಸಶಸ್ತ್ರ ಮೀಸಲು ಪೊಲೀಸ್ ಪಡೆ, ನಾಲ್ವರು ಡಿವೈಎಸ್ಪಿ, ಒಂಭತ್ತು ಇನ್ಸ್​​ಪೆಕ್ಟರ್, 25 ಸಬ್ ಇನ್ಸ್​​ಪೆಕ್ಟರ್, 300 ಮಂದಿ ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಚುನಾವಣೆ ನಡೆಯುವ ಸ್ಥಳದಿಂದ 100 ಮೀಟರ್ ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

ಮಾರ್ಗ ಬದಲಾವಣೆ:

ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಹಿನ್ನೆಲೆ ನಗರದ ಹಳೇ ಪಿಬಿ ರಸ್ತೆಯ ಗಾಂಧಿ ವೃತ್ತದಿಂದ ಎಸಿ ಕ್ರಾಸ್​​ವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ಹಳೇ ಪಿಬಿ ರಸ್ತೆ ಮಹಾತ್ಮ ಗಾಂಧಿ ವೃತ್ತದಿಂದ ಜಯದೇವ ವೃತ್ತ, ಸ್ಕೌಟ್ ಅಂಡ್ ಗೈಡ್ಸ್ ರಸ್ತೆ, ಕೋರ್ಟ್ ರಸ್ತೆಯಿಂದ ಎಸಿ ಕ್ರಾಸ್​​ಗೆ ಬಂದು ಹರಿಹರ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.