ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರಿಕೆರೆ ಗ್ರಾಮದ ಹೊರ ವಲಯದಲ್ಲಿ ರಿನ್ಯೂವ್ ಪವರ್ ಪ್ಲಾಂಟ್ ಎಂಬ ಖಾಸಗಿ ಕಂಪನಿ ಪವರ್ ಪ್ಲಾಂಟ್ ಹಾಕಲು ಎಳೆಯಲು ಸಿದ್ಧತೆ ನಡೆಸಿದೆ. ಚಿತ್ರದುರ್ಗ-ಜಗಳೂರು ಪವರ್ ಪ್ಲಾಂಟ್ ಯೋಜನೆ ಇದಾಗಿದೆ.
ಈಗಾಗಲೇ ತಕ್ಕ ಮಟ್ಟಿಗೆ ಪರಿಹಾರ ನೀಡಿ ಜಗಳೂರು ಹಾಗು ಚಿತ್ರದುರ್ಗ ಭಾಗದಲ್ಲಿ ಕಂಬಗಳನ್ನು ಜಮೀನಿನಲ್ಲಿ ಹೂಳುವ ಮೂಲಕ ಪವರ್ ಲೈನ್ ಎಳೆದಿದ್ದು, ಅ ಕಾಮಗಾರಿ ಜಗಳೂರು ತಾಲೂಕಿನ ಬಿದರಿಕೆರೆಗೆ ಬಂದು ನಿಂತಿದೆ. ಆದ್ರೆ, ಈ ಭಾಗದ ರೈತರು ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಕಂಪನಿಯವರಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಬಿದರಿಕೆರೆ ಗ್ರಾಮದ ಕೂಗಳತೆಯಲ್ಲಿ ಈಗಾಗಲೇ ಪವರ್ ಪ್ಲಾಂಟ್ ನಿರ್ಮಾಣ ಮಾಡಲು ರಿನ್ಯೂವ್ ಪವರ್ ಕಂಪನಿ ಜಮೀನು ಖರೀದಿ ಮಾಡಿ ಸಿದ್ಧತೆ ನಡೆಸಿದ್ದಾರೆ. ಈ ಪವರ್ ಪ್ಲಾಂಟ್‌ಗೆ ಲೈನ್ ಎಳೆಯಲು ರೈತರ ಜಮೀನಿನಲ್ಲಿ ಕಂಬಗಳನ್ನು ಅಳವಡಿಸಬೇಕಾಗಿದೆ. ಅದ್ರೆ ಸಾಕಷ್ಟು ರೈತರು ಈ ಪವರ್ ಲೈನ್ ಜಮೀನಿನ ಮೇಲೆ ಹೋದ್ರೆ ತಮ್ಮ ಜಮೀನು ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ. ಬೆಳೆ ಬೆಳೆಯಲು ಆಗುವುದಿಲ್ಲ ಎಂದು ಜಮೀನು ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಪವರ್ ಪ್ಲಾಂಟ್ನ ಲೈನ್ ನಮ್ಮ ಜಮೀನಿನ ಮೂಲಕ ಹಾದು ಹೋದ್ರೆ ನಮ್ಮ ಜಮೀನುಗಳಿಗೆ ಬೆಲೆ ಇರುವುದಿಲ್ಲ ಎಂದು ರೈತರು ಜಮೀನು ನೀಡಲು ಹಿಂದೇಟು ಹಾಕಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಎಸಿ ಮಮತ ಹೊಸಗೌಡರ್ ಅವರು ಬಿದರಿಕೆರೆ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಕೆಲ ರೈತರಿಗೆ ಸಮಜಾಯಿಷಿ ನೀಡಿ ಜಮೀನು ಕೊಡಲು ಒಪ್ಪಿಸಿದ್ದಾರೆ. ಇನ್ನು ಕೆಲವರು ರಕ್ತ ಚೆಲ್ಲುತ್ತೇವೆ ಆದ್ರೆ ಜಮೀನು ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಪ್ರತಿ ತಾಲೂಕಿಗೆ ಒಂದರಂತೆ ಪ್ರತಿವರ್ಷ ಶಾಲೆ ಮಂಜೂರು: ಸಚಿವ ಬಿ. ಸಿ. ನಾಗೇಶ್
ರಿನ್ಯೂವ್ ಪವರ್ ಕಂಪನಿ ಈಗಾಗಲೇ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಪವರ್ ಪ್ಲಾಂಟ್ ಗಳನ್ನು ಹಾಕಲು ಮುಂದಾಗಿದೆ.