ETV Bharat / city

ದಾವಣಗೆರೆಯಲ್ಲಿ 6 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ

ದಾವಣಗೆರೆ ಜಿಲ್ಲೆಯ ಆರು ಕೋವಿಡ್ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ವೈರಸ್ ಪತ್ತೆಯಾಗಿದೆ.

Davanagere
ಬೆಣ್ಣೆನಗರಿಗೂ ವಕ್ಕರಿಸಿದ ಬ್ಲ್ಯಾಕ್ ಫಂಗಸ್: 6 ಪ್ರಕರಣಗಳು ಪತ್ತೆ
author img

By

Published : May 18, 2021, 7:15 AM IST

ದಾವಣಗೆರೆ: ಕೊರೊನಾ ಮಹಾಮಾರಿಯ ಮುಂದುವರೆದ ಭಾಗವಾಗಿರುವ ಬ್ಲ್ಯಾಕ್ ಫಂಗಸ್ ವೈರಸ್ ಬೆಣ್ಣೆನಗರಿಗೂ ಕಾಲಿಟ್ಟಿದ್ದು, ಜಿಲ್ಲೆಯಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ.

ನಗರದ ಬಾಪೂಜಿ ಖಾಸಗಿ ಆಸ್ಪತ್ರೆಯಲ್ಲಿ 4, ಎಸ್.ಎಸ್.ಖಾಸಗಿ ಆಸ್ಪತ್ರೆ 1, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 1 ಪ್ರಕರಣ ಕಂಡುಬಂದಿದೆ. ಸೋಮವಾರ ಕೊರೊನಾ ರೋಗಿಗಳಿಗೆ ಪರೀಕ್ಷೆ ಮಾಡಿಸಿದಾಗ ರೋಗ ತಗುಲಿರುವುದು ದೃಢಪಟ್ಟಿದೆ. ಇದರಿಂದ ಉಳಿದ ರೋಗಿಗಳು ಆತಂಕಕ್ಕೀಡಾಗಿದ್ದಾರೆ.

ಕೊರೊನಾದಿಂದ ಗುಣಮುಖರಾಗುವ ರೋಗಿಗಳಲ್ಲೇ ಹೆಚ್ಚಾಗಿ ಈ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಕೊರೊನಾಗೆ ತಂದೆ - ತಾಯಿ,ಅಜ್ಜಿ-ತಾತ ಬಲಿ: ತಬ್ಬಲಿಯಾದ ಬಾಲಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.